Mangalore and Udupi news
Blog

ಕಾರ್ಕಳ : ಪಾದಚಾರಿಯೊಬ್ಬರಿಗೆ ಕಾರು‌ ಢಿಕ್ಕಿ ಹೊಡೆದು ಸಾವು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕಾರು ಬಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಆ ವ್ಯಕ್ತಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.ಮೃತಪಟ್ಟ ಪಾದಚಾರಿ ಸುರೇಶ್ ಎಂದು ತಿಳಿದು ಬಂದಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 05/11/2025 ರಂದು ಸಂಜೆ 17:00 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಅರಣ್ಯ ಇಲಾಖೆಯ ಕಛೇರಿ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ KA-21-Z-1704 ನೇ ಕಾರಿನ ಚಾಲಕ ರಕ್ಷಣ್ ಕಾರನ್ನು ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಸುರೇಶ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ನಂತರ ಕಾರನ್ನು ಒಮ್ಮೆಲೆ ರಸ್ತೆಯ ಬಲಬದಿಗೆ ತಿರುಗಿಸಿ ರಸ್ತೆಯ ಬಲ ಬದಿ ಇದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮಗುಚಿ ಬಿದ್ದಿದ್ದು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸುರೇಶ ರವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳಿಯರು ಗಾಯಗೊಂಡ ಎಲ್ಲನ್ನು ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ಸೇರಿಸಿರುತ್ತಾರೆ. ಗಂಭೀರ ಗಾಯಗೊಂಡ ಸುರೇಶರವರು ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆ ಮೃತಪಟ್ಟಿರುತ್ತಾರೆ ಮತ್ತು ಕಾರಿನಲ್ಲಿ ಪ್ರಯಾಣಿಕರಾಗಿದ್ದ ಸಮರ್ಥ, ಸ್ವಯಂ ಶೆಟ್ಟಿ, ಅಮನ್ ವಿ ಶೆಟ್ಟಿ ಮತ್ತು ರಿಯಾನ್ ಎಂಬುವವರು ಗಾಯಗೊಂಡಿದ್ದು ಕಾರು ಚಾಲಕ ರಕ್ಷಣ್ ಸಹಾ ಗಾಯಗೊಂಡಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2025 ಕಲಂ: 281, 125(a), 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment