ತೆಂಕ ಎರ್ಮಾಳು ಪೆಟ್ರೋಲ್ ಬಂಕ್ ಬಳಿ ದುರ್ಘಟನೆ
ಪಡುಬಿದ್ರಿ: ಕಾರೊಂದು ಪಾಚಾರಿಗೆ ಡಿಕ್ಕಿಯೊಡೆದ ಪರಿಣಾಮ ಪಾದಚಾರಿ ವ್ಯಕ್ತಿಯೊರ್ವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಗಾಯಗೊಂಡವರು ಹಳೆಯಂಗಡಿ ಇಂದಿರಾ ನಗರ ನಿವಾಸಿ ಸಂಶುದ್ದೀನ್,
ತಲೆಗೆ ಗಂಭೀರ ಗಾಯಗೊಂಡರೆ, ಕಾಲಿನ ಎಲುಬು ತುಂಡಾಗಿದೆ.
ಇವರು ಹೆಚ್ಚಾಗಿ ಎರ್ಮಾಳು ಮಸೀದಿ ಬಳಿ ಇರುತ್ತಿದ್ದಾರೆ ಎಂಬುದಾಗಿ ಸ್ಥಳೀಯ ತಿಳಿಸಿದ್ದಾರೆ. ಅಪಘಾತ ನಡೆಸಿದ ಕಾರು ರಸ್ತೆ ವಿಭಜಕವೇರಿ ನಿಂತಿದೆ. ಸ್ಥಳಕ್ಕೆ ಬಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಕಾರನ್ನು ತೆರವುಗೊಳಿ ಹೆದ್ದಾರಿ ಸಂಚಾರ ಸುಗಮಗೊಳಿಸಿದ್ದಾರೆ.
ಫೋಟೋ ಕ್ಯಾಪ್ಶನ್
ಗಾಯಾಳು ಹಾಗೂ ಅಪಘಾತ ನಡೆಸಿದ ಕಾರು