ಮಂಗಳೂರು; ಭೀಕರ ಅಪಘಾತಕ್ಕೆ ಯುವ ಇಂಜಿನಿಯರ್ ಬಲಿಯಾಗಿರುವ ಘಟನೆ ಯೆಯ್ಯಾಡಿ ಜಂಕ್ಷನ್‌ನಲ್ಲಿ ಬುಧವಾರ ನಡೆದಿದೆ.
ಸ್ಥಳೀಯ ನಿವಾಸಿ ಕೌಶಿಕ್ (27) ಮೃತ ದುರ್ದೈವಿ. ಕೌಶಿಕ್ ನಿತ್ಯವೂ ಬೆಳಗ್ಗೆ ಮನೆಗಳಿಗೆ ಪೇಪರ್ ಹಾಕುತ್ತಿದ್ದರು. ತಂದೆಯ ಜೊತೆಗೆ ಬೆಳಗ್ಗೆ ಪೇಪರ್ ಹಾಕಿ ಬರುತ್ತಿರಬೇಕಾದರೆ ಕೌಶಿಕ್ ಓಡಿಸುತ್ತಿದ್ದ ಬೈಕ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರ ಗಾಯಗೊಂಡ ಕೌಶಿಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

previous post