ಉಡುಪಿ : ಕಿನ್ನಿಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೈಸೂರು ನೋಂದಣಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರೂ ಮೌಲ್ಯದ ಗಾಂಜಾವನ್ನು ಉಡುಪಿ ಸೆನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹುಣಸೂರು ಬಿಳಿಕೆರೆ ಹೋಬಳಿಯ ಗಣೇಶ (38 ವರ್ಷ) ಆಂದ್ರ ಪ್ರದೇಶ ಅನಂತಪುರಂ ಜಿಲ್ಲೆಯ ಪಿ. ಗೋಪಾಲ ರೆಡ್ಡಿ, ( 43 ವರ್ಷ) ಬಂಧಿತರು. ಪೊಲೀಸರು ಒಟ್ಟು 10 ಚೀಲಗಳಲ್ಲಿ ಗಾಂಜಾ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಆರೋಪಿಗಳಿಂದ 2 ಮೊಬೈಲ್ ಪೋನ್, 1520 ರೂ. ನಗದು, 20 ಲಕ್ಷ ಅಂದಾಜು ಮೌಲ್ಯದ ಗೂಡ್ಸ್ ಲಾರಿ ಸೇರಿ ಒಟ್ಟು
72,21,520 ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
