ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಅಮಾಸೆಬೈಲು ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನಾಲ್ವರು ಆರೋಪಿಗಳಾದ ಬಸವರಾಜ, ಮೇಘರಾಜ, ಲೋಹಿತ್, ಇಮ್ರಾನ್ ಎಂಬವರನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ : ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಮುತ್ತಿನಕಟ್ಟೆಯ ಬಳಿ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ವಿನೋದ್ ಬಿ ಬಾಗಣ್ಣನವರ್ ಸಿಪಿಸಿ ಅಮಾಸೆಬೈಲು ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ದಿನಾಂಕ: 06.09.2025 ರಂದು ಬೆಳಿಗ್ಗೆ ಸಮಯ 06:00 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ KA-15-7461 ನೇ TATA Intra ವಾಹನವೊಂದು ಬರುತ್ತಿದ್ದು ನೋಡಿ ವಾಹನ ನಿಲ್ಲುವಂತೆ ಚಾಲಕನಿಗೆ ಸೂಚನೆ ನೀಡಿದ್ದು ವಾಹನವನ್ನು ತಪಾಸಣೆ ಮಾಡಿದಾಗ ಹಿಂದುಗಡೆ ಬಾಡಿಯಲ್ಲಿ ಎರಡು ಕೋಣಗಳಿಗೆ ಯಾವುದೇ ಮೇವು ಅಹಾರ ನೀಡದೆ ಒಂದಕೊಂದು ತಾಗಿಕೊಂಡು ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಿಸಲಾಗಿ ಸದ್ರಿ ಜಾನುವಾರುಗಳನ್ನ ಮಾಂಸ ಮಾಡುವ ಉದ್ದೇಶ ದಿಂದ ವಧೆಗಾಗಿ ಕೊಂಡು ಹೋಗುತ್ತೀರುವುದಾಗಿ ತಿಳಿಸಿರುತ್ತಾರೆ. ಎರಡು ಕೋಣಗಳ ಅಂದಾಜು ಮೌಲ್ಯ 30,000/- ಮತ್ತು TATA Intra ವಾಹನದ ಮೌಲ್ಯ 04 ಲಕ್ಷರೂಪಾಯಿಗಳಾಗಬಹುದು. ಸದ್ರಿ ವಾಹನದಲ್ಲಿ ಇದ್ದ ಆರೋಪಿತರಾದ 1) ಬಸವರಾಜ (27) ತಂದೆ:ನಾಗರಾಜಪ್ಪ 2) ಮೇಘರಾಜ್ 3)ಲೋಹಿತ್ (27) ತಂದೆ: ಬಸವರಾಜಪ್ಪ 4)ಇಮ್ರಾನ್ (24) ತಂದೆ: ಖಲೀಲ್ ತಮ್ಮ ತಪ್ಪಿತ್ವದ ತಿಳುವಳಿಕೆ ನೀಡಿ ಸದ್ರಿ ಜಾನುವಾರು ಅವುಗಳನ್ನು ತಂದ ವಾಹನ ಸಮೇತ ಅಪಾದಿತರುಗಳನ್ನು ಪೊಲೀಸ್ ಠಾಣೆಗೆ ಹಾಜರುಪಡಿಸಿರುತ್ತಾರೆ.