ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹರೀಶ್ ತೋಳಾರ್ ಕೊಲ್ಲೂರು ಇವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಜಿಲ್ಲಾ ಸಮಿತಿ ಅಧ್ಯಕ್ಷ ತಿಮ್ಮ ಪೂಜಾರಿ ಮಣೂರು ಆದೇಶಿಸಿದ್ದಾರೆ.ಪ್ರಬಲ ಮೊಗವೀರ ಸಮುದಾಯದ ಮುಖಂಡರಾಗಿರುವ ಅವರನ್ನು ಜಿಲ್ಲಾ ಸಮಿತಿಗೆ ನಿಯುಕ್ತಿ ಗೊಳಿಸುವಂತೆ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಹಾಗೂ ಅರವಿಂದ್ ಪೂಜಾರಿ ಪಡುಕೋಣೆ ಅವರು ಶಿಫಾರಸು ಮಾಡಿದ್ದರು.
previous post

