ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮಹಿಳೆಯೊಬ್ಬರು ತನಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರು ಮಿಣ್ಕು ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರ ರಘು (41) ರಾಮ ಮಂದಿರದ ಹತ್ತಿರ ಕೋಡಿ ಅಂಚೆ ಕಸಬ ಗ್ರಾಮ ಕುಂದಾಪುರ ಇವರ ತಾಯಿ ಮಿಣ್ಕು (56) ಎಂಬುವವರಿಗೆ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಇದ್ದು ಈ ಖಾಯಿಲೆಗೆ ಔಷಧವನ್ನು ಸೇವಿಸುತ್ತಿದ್ದರು. ತನಗಿರುವ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/09/2025 ರಂದು ಬೆಳಿಗ್ಗೆ 09:00 ಗಂಟೆಯಿಂದ 10:00 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಊಟದ ಕೋಣೆಯ ತಾರಸಿಗೆ ಅಳವಡಿಸಿದ ಸೀಲಿಂಗ್ ಪ್ಯಾನಿಗೆ ನೈಲಾನ್ ಸೀರೆ ಕಟ್ಟಿಕೊಂಡು ಕುತ್ತಿಗೆಗೆ ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾರೆ.


