Mangalore and Udupi news
Blog

ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ, ಮಧುಮೇಹ ರಕ್ತದೊತ್ತಡ ತಪಾಸಣೆ ದಂತ ತಪಾಸಣಾ ಶಿಬಿರ

ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ರೋಟರಿ ಕ್ಲಬ್ ಪಡುಬಿದ್ರಿ, ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ (ನಿ) ಹಳೆಯಂಗಡಿ, ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ (ರಿ) ಪಡುಬಿದ್ರಿ , ಪ್ರಸಾದ್ ನೇತ್ರಾಲಯ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ ಹಾಗೂ ಸ್ಮ್ಯೆಲ್ ಕ್ರಾಫ್ಟ್ ಡೆಂಟಲ್ ಕೇರ್ ಪಡುಬಿದ್ರಿ.

ಇದರ ಸಂಯುಕ್ತ ಆಶ್ರಯದಲ್ಲಿ “ಉಚಿತ ಕಣ್ಣಿನ ತಪಾಸಣೆ , ಪೊರೆ ಶಸ್ತ್ರ ಚಿಕಿತ್ಸೆ , ಮಧುಮೇಹ ರಕ್ತದೊತ್ತಡ ತಪಾಸಣೆ ಹಾಗೂ ದಂತ ತಪಾಸಣಾ ಶಿಬಿರವು ಅಗಸ್ಟ್ 16 ರಂದು ಬೆಳಿಗ್ಗೆ 9:00 ಗಂಟೆಯಿಂದ 12:30 ಗಂಟೆಯವರೆಗೆ ಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ನೇರವರಿಸಲಿದ್ದು , ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಗಣೇಶ್ ದೇವಾಡಿಗ ಸುಕುಮಾರ್ ಶ್ರೀಯಾನ್ , ಅಶೋಕ್ ಸಾಲ್ಯಾನ್
ಡಾ! ಶಿವಕುಮಾರ್ ಕರ್ಜೆ ವಿಶ್ವಾಸ್ ವಿ.ಅಮೀನ್, ರಚನ್ ಸಾಲ್ಯಾನ್ , ಸತೀಶ್ ಸಾಲ್ಯಾನ್ ಮಣಿಪಾಲ್ ಭಾಗವಹಿಸಲಿದ್ದಾರೆ ಡಾ! ಕೃಷ್ಣ ಪ್ರಸಾದ್ , ಡಾ! ರಾಜಶ್ರೀ ಕಿಣಿ, ಡಾ! ಅಭಿಷೇಕ್ ಪೂಜಾರಿ ಯವರು ಶಿಬಿರವನ್ನು ನಡೆಸಿ ಕೊಡಲಿದ್ದಾರೆ…

Related posts

Leave a Comment