ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಇಬ್ಬರು ಆರೋಪಿಗಳು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳ್ಳತನ ನಡೆಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಾಳಾವರದ ನಿವಾಸಿ ಮನೋಹರ ಎಂಬವರ ದನ ಕಳ್ಳತನವಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಮನೋಹರ (33) ಕಾಳಾವರ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 27/07/2025 ರಂದು ಬೆಳಿಗ್ಗೆ ತಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ನಂತರ 2 ದನಗಳು ಮನೆಗೆ ವಾಪಾಸು ಬಾರದೇ ಇದ್ದು ನಂತರ 1 ದನ ದಿನಾಂಕ 28/07/2025 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ಮನೆಗೆ ವಾಪಾಸು ಬಂದಿದ್ದು ನಂತರ ಉಳಿದ 1 ದನವು ಬಾರದೇ ಇರುವುದನ್ನು ನೋಡಿ ಪರಿಸರದಲ್ಲಿ ಹಾಡಿಯಲ್ಲಿ ಎಷ್ಟು ಹುಡುಕಿದರು ಸಿಕ್ಕಿರುವುದಿಲ್ಲ. ನಂತರ ಪಿರ್ಯಾದಿ ಈ ದಿನ ಸಂಜೆ ಸುಮಾರು 19:00 ಗಂಟೆ ಕಾಳಾವರ ಜಂಕ್ಷನ್ ನ ಅಭಿಮಾನ ಬಾರ್ ಬಳಿಯಲ್ಲಿರುವ ನಂದಿಕೇಶ್ವರ ಬೇಕರಿಯ ಸಿಸಿ ಟಿವಿ ಕ್ಯಾಮಾರಾವನ್ನು ಪರಿಶೀಲಿಸಿದಲ್ಲಿ ಪಿರ್ಯಾದಿದಾರರ ಮನೆಯ 2 ದನಗಳು ಬೇಕರಿಯ ಪಕ್ಕದಲ್ಲಿ ಮಲಗಿದ್ದು ದಿನಾಂಕ 28/07/2025 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ಆ ದನಗಳಲ್ಲಿ 1 ದನವನ್ನು ಯಾರೋ 2 ಜನರು ಯಾವುದೋ ಆಹಾರವನ್ನು ದನಕ್ಕೆ ನೀಡಿ ದನದ ಕೊಂಬನ್ನು ಹಿಡಿದು ಗಟ್ಟಿಯಾಗಿ ಎಳೆದು ದನದ ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿರುವುದು ಕಂಡು ಬಂತ್ತು ದನವನ್ನು 2 ಜನ ಆರೋಪಿಗಳು ವಧೇ ಮಾಡುವ ಉದ್ದೇಶದಿಂದ ಯಾವುದೋ ವಾಹನದಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವು ಮಾಡಿದ ದನವು ಕಂದು ಬಣ್ಣದ 5 ವರ್ಷದ ಪ್ರಾಯದ ದನವಾಗಿದ್ದು ಅದರ ಅಂದಾಜು ಮೌಲ್ಯ ಸುಮಾರು 5000/- ಆಗಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 45/2025 ಕಲಂ: 303(2) BNS & 4,5, 12 Cow Slaughter Act & 11(1)(d) Cruelty Animal Act ರಂತೆ ಪ್ರಕರಣ ದಾಖಲಾಗಿರುತ್ತದೆ.