Mangalore and Udupi news
Blog

ಇಂದು ನಡೆದ ವ್ಯವಹಾರ ಸಮ್ಮೇಳನದಲ್ಲಿ *ಜೆಸಿ ವೀಣಾ ಆಚಾರ್ಯ* ರವರವರಿಗೆ *ಸಾದನಶ್ರೀ ಪ್ರಶಸ್ತಿ ಸ್ವೀಕರಿಸುತ್ತಾರೆ* .

ಜೆಸಿ ವೀಣಾ ಆಚಾರ್ಯ ಅವರು ಹಲವು ವರ್ಷಗಳಿಂದ ಜೆಸಿ ಸಂಸ್ಥೆಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಯ ಹೆಮ್ಮೆವಂತೆಯಾಗಿದ್ದಾರೆ. ಅವರು ಬೆಳ್ಮನ್ನಿನಲ್ಲಿ “ವೃದ್ಧಿ ಲೇಡಿಸ್ ಟೈಲರ್ಸ್” ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ಟೈಲರ್ ಉದ್ಯಮವನ್ನು ನಡೆಸುತ್ತಿದ್ದಾರೆ. ಶ್ರೀಯುತ ಕಾಂತು ಆಚಾರ್ಯ ಮತ್ತು ವಸಂತಿ ಆಚಾರ್ಯ ದಂಪತಿಯ ಪುತ್ರಿಯಾಗಿರುವ ವೀಣಾ ಆಚಾರ್ಯ ಅವರು, ಶ್ರೀಯುತ ರವಿ ಆಚಾರ್ಯರವರ ಧರ್ಮಪತ್ನಿಯಾಗಿ, ವೃದ್ಧಿ ಹಾಗೂ ಸಮೃದ್ಧಿ ಎಂಬ ಮಕ್ಕಳೊಂದಿಗೆ ಸುಖಿ ಕುಟುಂಬ ಜೀವನ ನಡೆಸುತ್ತಿದ್ದಾರೆ.


ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಸುಮಾರು 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಅವರು ಟೈಲರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಅನೇಕ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಅವರ ಆತ್ಮನಂಬಿಕೆ ಹಾಗೂ ಸ್ವಾವಲಂಬನೆಗೆ ಸಹಾಯ ಮಾಡುತ್ತಿದ್ದಾರೆ. ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರ ಸಮಾಜ ಸೇವೆಯ ಬದ್ಧತೆಯು ಸತ್ಕಾರಕ್ಕೆ ಅರ್ಹವಾಗಿದೆ.

ಈ ಎಲ್ಲ ಸಾಧನೆಗಳ ಮಾನ್ಯತೆ ರೂಪವಾಗಿ, ನಮ್ಮ ಜೆಸಿ ಸಂಸ್ಥೆಯೆ ಪರವಾಗಿ ಜೆಸಿ ವೀಣಾ ಆಚಾರ್ಯರಿಗೆ “ಸಾಧನಾಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರು ಪಡೆದಿರುವ ಈ ಗೌರವವು ಅವರ ಶ್ರಮದ, ಸೇವೆಯ ಮತ್ತು ದೃಢನಿಶ್ಚಯದ ಪ್ರತೀಕವಾಗಿದೆ.

*ಅಭಿನಂದನೆಗಳು*

Related posts

Leave a Comment