ಮಹಾಕಾಳಿ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಯವರ ಆಶೀರ್ವಚನದಲ್ಲಿ ಸ್ಥಾಪಿತವಾದ ಸಂಘಟನೆ ಇದರಲ್ಲಿ ಯಾವುದೇ ಧರ್ಮ ಬೇಧವಿಲ್ಲದೆ, ರಾಜಕೀಯ ರಹಿತ, ಸನಾತನ ಹಿಂದೂ ಧರ್ಮದ ಆಸಕ್ತರಿಗೆ ನೆರವಾಗುವ ಹಾಗೂ ಸಮಾಜಿಕ ಕಳಕಳಿಯನ್ನು ಇಟ್ಟು ಕೊಂಡು ಹುಟ್ಟಿಕೊಂಡ ಸಂಘಟನೆಯೇ ಸದ್ಧರ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಸಂಸ್ಥೆ ಈ ಸಂಸ್ಥೆಯ ಮೂಲ ಕೇಂದ್ರ ಮಹಾಕಾಳಿ ಮಹಾ ಸಂಸ್ಥಾನ ಪೀಠ ನಿಪ್ಪಾಣಿ.
ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿ ಘಟಕದ ವತಿಯಿಂದ ಬ್ರಹ್ಮಾವರದ ಅಪ್ಪ ಅಮ್ಮ ಚಾರಿಟೇಬಲ್ ಟ್ರಸ್ಟ್ ವೃದ್ರಾಶ್ರಮಕ್ಕೆ ಭೇಟಿಕೊಟ್ಟು ಒಂದು ದಿನದ ಅನ್ನದಾನ ದ ವ್ಯವಸ್ಥೆಯನ್ನು ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಂಜಣ್ಣ ಸೇವ ಬ್ರಿಗೇಡ್ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಮನೋಜ್ ಕೋಡಿಕೆರೆ ಉಡುಪಿಯ ಪ್ರಖ್ಯಾತ ಯುವ ಉದ್ಯಮಿ ಶ್ರೀಯುತ ಅಜಯ್ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಸದ್ಧರ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮನೀಶ್ ಪೂಜಾರಿ ಶ್ರೀಯುತ ವಿಶಾಲ್ ಪೂಜಾರಿ ಸಂಘಟನೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಯುವ ಉದ್ಯಮಿ ಶ್ರೀಯುತ ಅನಂತ್ ಕೃಷ್ಣ ಶ್ಯಾನ್ಭಾಗ್ ಉಪಾಧ್ಯಕ್ಷರಾದ ಸಂತೋಷ್ ನಂದಳಿಕೆ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ವಿಶಾಲ್ ಪೂಜಾರಿ ಶ್ರೀಯುತ ಸ್ವರೂಪ್ ಶ್ರೀಯುತ ಹೇಮಂತ್ ಸಂಘಟನೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.