ಒಡಿಶಾ: ಒಂದೇ ದಿನ ಅಪ್ರಾಪ್ತೆ ಮೇಲೆ ಬೇರೆ ಬೇರೆ ವ್ಯಕ್ತಿಗಳಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಬಾಲಕಿ ತನ್ನ ಸ್ನೇಹಿತ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಆಕೆಯನ್ನು ಅಪಹರಿಸಿ ಮಲ್ಕನ್‌ಗಿರಿ ಪಟ್ಟಣದಿಂದ 10-15 ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಎಳೆದೊಯ್ದಿದ್ದರು.
ಅಲ್ಲಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸಗಿದ್ದರು, ಪೊಲೀಸ್ ಮೂಲಗಳ ಪ್ರಕಾರ ಆಕೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಲಾಗಿದೆ. ಆಕೆ ಹೇಗೋ ಆ ಕಾಡಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಅದೇ ರೀತಿ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಳು. ಮಲ್ಕಂಗಿರಿ ಪಟ್ಟಣದ ಹೊರವಲಯದಲ್ಲಿ, ಮೊದಲ ದಾಳಿಕೋರರಿಂದ ತಪ್ಪಿಸಿಕೊಂಡ ನಂತರ ಟ್ರಕ್ ಚಾಲಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಸ್ಥಳೀಯರು ಚಾಲಕನ ಮೇಲೆ ಅನುಮಾನ ಪಟ್ಟು ಅವನೊಂದಿಗಿರುವ ಅಪ್ರಾಪ್ತ ಬಾಲಕಿಯನ್ನು ಗಮನಿಸಿ ಆಕೆಯನ್ನು ರಕ್ಷಿಸಿದ್ದಾರೆ. ಮಲ್ಕಂಗಿರಿ ಪೊಲೀಸರು ತನಿಖೆ ನಡೆಸಿ ಟ್ರಕ್ ಚಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲ ಅತ್ಯಾಚಾರ ಘಟನೆ ಮಲ್ಕನ್‌ಗಿರಿ ಪಟ್ಟಣದಿಂದ ಸುಮಾರು 10-15 ಕಿಲೋಮೀಟರ್ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಟ್ರಕ್ ಚಾಲಕ ಸೇರಿದಂತೆ ನಾಲ್ವರು ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ.