ಪಡುಬಿದ್ರಿ: ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೆಜಮಾಡಿಯಲ್ಲಿ1951ನೇ ಮದ್ಯವರ್ಜನಾ ಶಿಬಿರ ಹೆಜಮಾಡಿ ಬಿಲ್ಲದ ಸಂಘದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರತ್ನಾಕರ್ ರಾಜ್ ಬೀಡು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು,
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್, ಇದೊಂದು ಉತ್ತಮ ಕಾರ್ಯಕ್ರಮ, ಯಾವುದೋ ಕಾರಣಕ್ಕೆ ಮದ್ಯ ವ್ಯಸನಿಗಳಾಗಿ ರೂಪುಗೊಳ್ಳುವ ವ್ಯಕ್ತಿಗಳು ತಮ್ಮ ಸಂಸಾರದ ಒಳಿತು ಕೆಡುಕುಗಳನ್ನು ಮರೆತು ಕುಡಿತಕ್ಕೆ ದಾಸರಾಗುತ್ತಾರೆ, ಸಮಾಜ ದೃಷ್ಟಿಯಲ್ಲಿ ಆತ ಸಹಿತ ಮನೆಮಂದಿಯೂ ಸಮಾಜದ ಕೀಳು ನುಡಿಗಳಿಗೆ ಕಿವಿಯಾಗುವ ಸಾಧ್ಯತೆಗಳೇ ಹೆಚ್ಚು, ಯಾವುದೇ ತಪ್ಪೆಸಗದೆ ಆತನ ಪತ್ನಿಯಾದ ತಪ್ಪಿಗೊ, ಮಗನೊ-ಮಗಳೊ ಆದ ತಪ್ಪಿಗೂ ಸಮಾಜದಲ್ಲಿ ತಮ್ಮ ಗೌರವವನ್ನು ಕಳೆದುಕೊಳ್ಳುವ ಸ್ಥಿತಿ, ಇಂಥಹ ಪರಿಸ್ಥಿತಿಯಲ್ಲಿ ಕುಡಿತ ಬಿಡ ಬೇಕೆಂಬ ಮನಸ್ಸಿದ್ದರೂ ಪೂರಕ ವ್ಯವಸ್ಥೆ ಇಲ್ಲದೆ ಇರುವಾಗ, ಈ ಮದ್ಯವರ್ಜನಾ ಶಿಬಿರದ ಮೂಲಕ ಅವರ ಮಾರ್ಗದರ್ಶನದಲ್ಲಿ ಕುಡಿತದ ಛಟದಿಂದ ಮುಕ್ತರಾಗಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಹೆಜಮಾಡಿ ಮದ್ಯವರ್ಜನ ಶಿಬಿರದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ವಹಿಸಿದ್ದರು, ಮುಖ್ಯ ಅಥಿತಿಗಳಾಗಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹೆಜಮಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ, ಕಾಪು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ದಯಾನಂದ ಹೆಜಮಾಡಿ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಇನ್ನಾ ಉದಯ ಕುಮಾರ್ ಶೆಟ್ಟಿ, ಕಟಪಾಡಿ ಜನಜಾಗೃತಿ ಸಮಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಕಾಪು ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಪ್ರಭೋದ್ ಚಂದ್ರ ಹೆಜಮಾಡಿ, ದಿವಾಕರ್ ಹೆಜಮಾಡಿ, ಸುಧಾಕರ್ ಕರ್ಕೇರ ಹೆಜಮಾಡಿ, ಭುಜಂಗ ಆಚಾರ್ಯ, ಗಣೇಶ್ ಆಚಾರ್ಯ, ಆಶಾ ಪ್ರಾಣೇಶ್ ಮುಂತಾದವರಿದ್ದರು.