Mangalore and Udupi news
Blog

ಮಿನಿ ಟಿಪ್ಪರ್ ಹಾಗೂ ಆಲ್ಟೊ ಕಾರು ನಡುವೆ ಅಪಘಾತ : ನವವಿವಾಹಿತ ಸಾವು…!!

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಚಾಲಕ ಮೃತಪಟ್ಟಿದ್ದು ಹಾಗೂ ಆತನ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡ ಘಟನೆ ವೀರಕಂಭ ಗ್ರಾಮದ ಕೆಲಿಂಜದಲ್ಲಿ ಸಂಭವಿಸಿದೆ.

ಸಾವನ್ನಪ್ಪಿದ ಚಾಲಕನನ್ನು ಅನಂತಾಡಿ ಆಶ್ವತ್ತಡಿ ಮೂಲದ ಅನೀಶ್ ಎಂದು ತಿಳಿದು ಬಂದಿದೆ.
ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಅನೀಶ್ ಹಾಗೂ ಅವರ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ತಡರಾತ್ರಿ ಚಾಲಕ ಅನೀಶ್ ಅನಂತಾಡಿ (34) ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

Related posts

Leave a Comment