ನಂದಳಿಕೆ ಎಂ.ಕೆ. ಫ್ರೆಂಡ್ಸ್‌ನ 4ನೇ ವರ್ಷದ ಕೆಸರ್‌ಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆ
ಇಂತಹ ಮಣ್ಣಿನ ಕ್ರೀಡೆಯಿಂದ ಒಗ್ಗಟ್ಟು ಮತ್ತು ಪರಸ್ಪರ ಪ್ರೀತಿ ಫಸರಿಸಲು ಸಾಧ್ಯ: ಅರವಿಂದ ಬೋಳಾರ್
ನಂದಳಿಕೆ: ಎಂ.ಕೆ. ಫ್ರೆಂಡ್ಸ್ ಇವರ ಆಶ್ರಯದಲ್ಲಿ 4ನೇ ವರ್ಷದ ಕೆಸರ್‌ಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟವು ಜು. 20ರಂದು ನಂದಳಿಕೆ ಮಾವಿಕಟ್ಟೆಯ ಮನ್‌ಬೊಟ್ಟು ಗದ್ದೆಯಲ್ಲಿ ಅದ್ದೂರಿಯಾಗಿ ಜರಗಿತು.
ತುಳುವ ಮಾಣಿಕ್ಯ ಅರವಿಂದ ಬೋಳಾರ್ ಅವರು ಸಮಾರಂಭವನ್ನು ಉದ್ಘಾಟಿಸಿ, ಪ್ರತಿಯೊಂದು ಜೀವಿ ಒಂದು ರೀತಿಯಲ್ಲಿ ಮಣ್ಣಿನಿಂದಲೇ ಹುಟ್ಟಿ ಬಂದಿರುತ್ತದೆ. ಕೃಷಿಯಲ್ಲಿ ನಮ್ಮ ಬದುಕು ಇದೆ. ಇಂತಹ ಮಣ್ಣಿನ ಕ್ರೀಡೆ ನಮ್ಮೊಳಗೆ ಒಗ್ಗಟ್ಟು ಮೂಡಿಸುತ್ತದೆ ಮತ್ತು ಪರಸ್ಪರ ಪ್ರೀತಿಯನ್ನು ಫಸರಿಸುತ್ತದೆ. ಸಂಘಟನೆಗಳ ಇಂತಹ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದಾಗ ಅದು ನಿರಂತರವಾಗಿ ನಡೆಯಲು ಸಾಧ್ಯ. ಎಂ.ಕೆ. ಫ್ರೆಂಡ್ಸ್‌ನ ಇಂತಹ ಆರೋಗ್ಯಕರ ಕ್ರೀಡಾಕೂಟ ನಿರಂತರ ನಡೆಯುವಂತಾಗಲಿ ಎಂದರು.
ಮಾವಿನಕಟ್ಟೆ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಣೇಶ್ ಕುಡ್ವ, ಉದ್ಯಮಿ ದಿವಾಕರ ಶೆಟ್ಟಿ, ಹಿಂದೂ ಮುಖಂಡರಾದ ಗುರುಪ್ರಸಾದ್ ನಾರಾವಿ, ಕಾರ್ಕಳದ ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಕೃಷ್ಣ ಶೆಟ್ಟಿ ಮುಡಾರು, ಅಜಯ್ ಶೆಟ್ಟಿ ಉಡುಪಿ, ಚಂದ್ರಶೇಖರ ಶೆಟ್ಟಿ ಕಾರ್ಕಳ, ಮಂಜಣ್ಣ ಸೇವಾ ಬ್ರಿಗೇಡ್ ನ ಅಧ್ಯಕ್ಷರಾದ ರಂಜಿತ್ ಶೆಟ್ಟಿ ಕುಳಾಯಿ, ಕಂಬಳ ಕೋಣದ ಯಜಮಾನ ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್, ಹಾಗೂ ರಾಜಕೀಯ ಮುಖಂಡರು, ಸಂಘಟನೆಯ ಪ್ರಮುಖರು ಹಾಗೂ ಎಂ.ಕೆ. ಫ್ರೆಂಡ್ಸ್ ಅಧ್ಯಕ್ಷರಾದ ಸಂತೋಷ್ ನಂದಳಿಕೆ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಕೋಣದ ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಅವರ ಕೋಣವನ್ನು ಗದ್ದೆಗೆ ಇಳಿಸುವ ಮೂಲಕ ಕ್ರೀಡಾಕೂಟಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ವಿಶೇಷ ಆಕರ್ಷಣೆಯಾಗಿ ನೆತ್ತೆರೆಕೆರೆ ಚಿತ್ರದ ಸ್ವರಾಜ್ ಶೆಟ್ಟಿ ಹಾಗೂ ಚಿತ್ರತಂಡ ಆಗಮಿಸಿದ್ದರು.
ಕು. ವೈಷ್ಣವಿ ಪ್ರಾರ್ಥಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.