ಸುರತ್ಕಲ್ : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಉತ್ತರ ಮಂಡಲದ ವತಿಯಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಯು.ಕೆ ಯ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಸಂಸ್ಥೆಯಲ್ಲಿ ಉನ್ನತ ಹುದ್ದೆ ಗಳಿಸಿರುವ ಮಂಗಳೂರಿನ ಕುವರಿ ಕುಮಾರಿ ಋತುಪರ್ಣ ಅವರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪೂಜಾ, ಪೈ,ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್, ರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮನಪಾ ಮಾಜಿ ಮೇಯರ್ ಜಯಾನಂದ ಅಂಚನ್, ಮಹಿಳಾ ಮೋರ್ಚದ ಉಪಾಧ್ಯಕ್ಷೆ ಬಬಿತಾ ರವೀಂದ್ರ, ಮಂಡಲ ಪ್ರಭಾರಿ ವಜ್ರಾಕ್ಷಿ ಪಿ. ಶೆಟ್ಟಿ, ಮಂಡಲ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿಗಳಾದ ಸಪ್ನಾ ಸುನಿಲ್, ಪವಿತ್ರ ನಿರಂಜನ್, ಉಪಾಧ್ಯಕ್ಷೆ ಸುಲತಾ ಪೂಜಾರಿ, ಕಾರ್ಯದರ್ಶಿ ಇಂದಿರಾ ಸುವರ್ಣ, ಸದಸ್ಯರಾದ ಸರೋಜಿನಿ , ಮಂಡಲ ಕಾರ್ಯಾಲಯ ಕಾರ್ಯದರ್ಶಿ ಉಮೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

next post