Mangalore and Udupi news
Blog

ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಮೂವರ ಬಂಧನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೃಷ್ಣಯ್ಯನ ಕಟ್ಟೆ ಗಸ್ತಿನ ಭೂತನಕಟ್ಟೆ ಕೆರೆ ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ತಂಡದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಬುಧವಾರ ಮುಂಜಾನೆ ಬಿಳಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಭೂತನಕಟ್ಟೆ ಅರಣ್ಯದಲ್ಲಿ ಜಿಂಕೆ, ಕಡವೆ, ಕಾಟಿ ಹಾಗೂ ಇನ್ನಿತರ ವನ್ಯ ಪ್ರಾಣಿಗಳನ್ನು ಭೇಟೆಯಾಡಲು ಸಂಚು ರೂಪಿಸುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶಕ್ಕರ್ ಅಕ್ಷಯ್ ಅಶೋಕ್‌ ರವರ ಸೂಚನೆಯಂತೆ ವಲಯ ಅರಣ್ಯಾಧಿಕಾರಿ ಸತೀಶ್‌ ಕುಮಾ‌ರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ದಾಳಿ ಸಂದರ್ಭ ಬಲ್ಲಶೆಟ್ಟಿ, ಮಹದೇವಶೆಟ್ಟಿ ಅಲಿಯಾಸ್ ಮಣಿಮಾದೇವ ಹಾಗೂ ಸೋಮಣ್ಣರವರನ್ನು ಬಂಧಿಸಿದ್ದಾರೆ.

ಈ ವೇಳೆ ಬಂಧಿತರೊಂದಿಗೆ ಇದ್ದ ಶಿವರಾಜು, ಸಿದ್ದ ಎಂಬವರು ಪರಾರಿಯಾದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಬಂಧಿತರಿಂದ ನಾಡಬಂದೂಕು ಜೊತೆಗೆ ಲೋಡಿಂಗ್ ರಾಡ್ ಮೂರು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಶಿವರಾಜು ಹಾಗೂ ಸಿದ್ದ ರವರ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Comment