ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಮತ್ತು ಗೆಳೆಯರ ಬಳಗ ಸುರತ್ಕಲ್ ವತಿಯಿಂದ ಇತ್ತೀಚೆಗಷ್ಟೇ ಮೇ 1 ರಂದು ಹಿಂದುತ್ವಕ್ಕಾಗಿ ಬಳಿದಾನಗೈದ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ನರಮೇಧಕ್ಕೆ ಬಲಿಯಾದ ಎಲ್ಲರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರದ್ಧಾಂಜಲಿ ಸಮರ್ಪಣೆ ನಡೆಯಿತು.
ಹಿಂದುತ್ವಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಜಿಹಾದಿಗಳ ಅಟ್ಟಹಾಸಕ್ಕೆ ಮೇ 1ರಂದು ಬಜಪೆ ಸಮೀಪ ಹತ್ಯೆಯಾಗಿ ಇಹಲೋಕ ತ್ಯಜಿಸಿದರು.
ಹಾಗೇ, ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗರ ಮೇಲೆ ಏಪ್ರಿಲ್ 22ರಂದು ಹಿಂದೂಗಳನ್ನು ಹುಡುಕಿ, ಹುಡುಕಿ ಭಯೋತ್ಪಾದಕರು ಗುಂಡು ಹಾರಿಸಿ ತನ್ನ ಕ್ರೌರ್ಯ ಮೆರೆದಿದ್ದರು.
ಇವರೆಲ್ಲರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಈ ಸಭೆಯಲ್ಲಿ ಸೇರಿದ್ದ ಎಲ್ಲರೂ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಮುಖ್ಯ ಅಥಿತಿಗಳಾಗಿ ಮಾತನಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ “ಕ್ಷಾತ್ರ ತೇಜಸ್ಸು ಉಳಿದರಸ್ಟೇ ಹಿಂದುತ್ವದ ಉಳಿವು”, ನಮ್ಮವರ ಮನಸ್ಥಿತಿ ಇನ್ನಾದರೂ ಬದಲಾಗಬೇಕಾಗಿದೆ ಎಂದು ತಿಳಿಸಿದರು.
ಉದ್ಯಮಿ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಹಿಂದುತ್ವ, ಹಿಂದೂ ಯುವಕರ ಮೇಲಿನ ದಾಳಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಇವುಗಳನ್ನು ತಡೆದು ನಿಲ್ಲಿಸಬೇಕಾದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಮಾದರಿಯ ಸರ್ಕಾರ ಬೇಕಿದೆ ಎಂದು ಹೇಳಿದರು.
ಹಿಂದೂ ಯುವಕರ ಹತ್ಯೆಯದಾಗ ಮನೆಗೆ ಹೋಗಿ ಸಾಂತ್ವನ ಹೇಳಿ ಹಣ ಕೊಟ್ಟು ಬರುವ ಇಲ್ಲಿಯ ಹಿಂದೂ ಪರ ಎಂಬ ಭಾವನೆಯ ರಾಜಕೀಯ ಪಕ್ಷದ ನಾಯಕರನ್ನು ನಂಬಿಕೊಂಡು ಹಿಂದೂ ಸಮಾಜದ ರಕ್ಷಣೆಯ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸತ್ತ ಮೇಲೆ ಮನೆಗೆ ಹೋಗಿ ಹಣ ಕೊಟ್ಟು ಬರುವ ಬದಲು ಹಿಂದುತ್ವಕ್ಕಾಗಿ ಜೀವ ಕೊಡಲು ತಯಾರಿರುವ ಯುವಕರ ಬೆನ್ನು ತಟ್ಟಿ ಅವರನ್ನು ಪ್ರೋತ್ಸಾಹಿಸುವ ನಾಯಕರು ಸೃಷ್ಟಿಯಾಗ್ಬೇಕು. ಆಗ ಸುಹಾಸ್ ನಂಥ ಇನ್ನಷ್ಟು ಯುವಕರು ಹಿಂದೂ ಸಮಾಜದ ರಕ್ಷಣೆಗೆ ಎದ್ದು ಬರುತ್ತಾರೆ ಎಂದು ಹೇಳಿದರು.
ಸುಹಾಸ್ ಶೆಟ್ಟಿಯವರ ಮಾವ ರಾಜೇಶ್ ಭಂಡಾರಿ ಮಾತನಾಡಿ, ಸುಹಾಸ್ ಕೊನೆಯವರೆಗೂ ರಾಜ ಗಾಂಭೀರ್ಯದಲ್ಲೇ ಬದುಕಿದ್ದನ್ನು ಸ್ಮರಿಸಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಹಿಂದೂ ಜಾಗರಣ ವೇದಿಕೆ ಮುಖಂಡರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹಿಂದೂ ಮುಖಂಡರು ಮತ್ತು ಉದ್ಯಮಿಗಳಾದ ರಾಜ್ ಶೇಖರ್ ಮಂಗಳೂರು, ಗೀತಾ ವೇಣುಗೋಪಾಲ್ ಸುರತ್ಕಲ್, ಮ.ನ.ಪಾ. ನಿಕಟಪೂರ್ವ ಸದಸ್ಯರಾದ ವೇದಾವತಿ ಕುಳಾಯಿ ಮತ್ತು ವರುಣ್ ಚೌಟ, ದಿ.ಸುಹಾಸ್ ಶೆಟ್ಟಿ ಅವರ ಮಾವನವರಾದ ರಾಜೇಶ್ ಭಂಡಾರಿ, ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ಮಂಜಣ್ಣ ಸೇವಾ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ, ಹಾಗೂ ಹಲವಾರು ಸಂಘ ಸಂಸ್ಥೆಯ ನಾಯಕರು, ಗೆಳೆಯರ ಬಳಗ ಮತ್ತು ಮಂಜಣ್ಣ ಸೇವಾ ಬ್ರಿಗೇಡ್ ನ ಸದಸ್ಯರು ಉಪಸ್ಥಿತರಿದ್ದರು.