Mangalore and Udupi news
ದೇಶ- ವಿದೇಶ

ಆಪರೇಷನ್ ಸಿಂಧೂರ: Proud of our brave armed forces. Jai Hind ಎಂದ‌ ರಾಹುಲ್ ಗಾಂಧಿ – ಗಾಂಧಿಯ ಶಾಂತಿಯ ಸಂದೇಶದ ಪೋಸ್ಟ್ ಡಿಲೀಟ್

ಹಿಂದೂ ನರಮೇಧಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಆಪರೇಷನ್ ಸಿಂಧೂರ ಹೆಸರಲ್ಲಿ ರಾತ್ರೋರಾತ್ರಿ ಉಗ್ರರಿಗೆ ನರಕ ದರ್ಶನ ಮಾಡಿಸಿದೆ ಭಾರತೀಯ ಸೇನೆ.‌ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ಥಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಆ ಮೂಲಕ ಖಡಕ್ ಪ್ರತ್ಯುತ್ತರ ನೀಡಿದೆ.

ಭಾರತದ ಈ ದಿಟ್ಟ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Proud of our brave armed forces. Jai Hind ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ‌ ಕೆಲವರು ಖುಷಿ ವ್ಯಕ್ತಪಡಿಸಿದರೆ, ಕೆಲವರು ವ್ಯಂಗ್ಯವಾಡಿದ್ದಾರೆ.

ಶಾಂತಿಯ ಪಾಠ ಹೇಳಿದ ಕಾಂಗ್ರೆಸ್ – ಪೋಸ್ಟ್ ಡಿಲೀಟ್
ಇನ್ನು ಉಗ್ರರ ನೆಲೆಗಳ‌ ಮೇಲೆ ದಾಳಿಯ ವಿಷಯ ಮುಂಜಾನೆ ಸುದ್ದಿ ಮಾಧ್ಯಮಗಳಲ್ಲಿ ‌ಪ್ರಸಾರ ಕಂಡಿವೆ.‌ ಇದಾಗುತ್ತಿದ್ದಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಕರ್ನಾಟಕ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು‌ ಮಹಾತ್ಮ ಗಾಂಧಿ ಅವರ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು.

ಭಾರತೀಯ ಸೇನೆ‌ ತಕ್ಕ ಉತ್ತರ ನೀಡಿದಕ್ಕೆ ಕಾಂಗ್ರೆಸ್ ಹೀಗೆ ಪೋಸ್ಟ್ ಮಾಡಿದೆ. ಪಾಕ್ ಪರ ನಿಂತಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ ಹಾಗೆ ಯುದ್ದ ಬೇಡ ನಿಲ್ಲಬೇಕಾಗಿತ್ತು.‌ ಯುದ್ಧ ಮಾಡಿದ್ದಕ್ಕೆ‌ ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಆಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಜೈ ಹಿಂದ್ ಎಂದ ರಾಹುಲ್ ಗಾಂಧಿ
ಭಾರತದ ಈ ದಿಟ್ಟ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Proud of our brave armed forces. Jai Hind ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹಲವರು ವ್ಯಂಗ್ಯವಾಡಿದ್ದಾರೆ. ಶಾಂತಿಯ ಮಂತ್ರದ ಪೋಸ್ಟ್ ಎಲ್ಲಿಗೆ ಮಾಯವಾಗಿದೆ‌ ಎಂದು ಹಲವರು ಪ್ರಶ್ನಿಸಿದ್ದಾರೆ. ‌ಆ ಮೂಲಕ‌ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಟೀಮ್ ಪೇಚಿಗೆ ಸಿಲುಕಿದೆ.

Related posts

1 comment

Clustering June 26, 2025 at 3:08 am

ಭಾರತೀಯ ಸೇನೆಗೆ ಸರಿಯಾದ ಬೆಂಬಲ ನೀಡುವುದು ಮುಖ್ಯ. ಕಾಂಗ್ರೆಸ್ ಪಕ್ಷದ ಪೋಸ್ಟ್ ಅಸ್ಪಷ್ಟವಾಗಿದೆ ಎಂದು ತೋರುತ್ತದೆ. ಸಿದ್ದರಾಮಯ್ಯ ಅವರ ಹೇಳಿಕೆ ಶಾಂತಿಯನ್ನು ಪ್ರೋತ್ಸಾಹಿಸುತ್ತದೆ. ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದು ಸರಿಯಾದ ನಿರ್ಧಾರವೇ? WordAiApi

Reply

Leave a Comment