ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಕ್ಕೆಂದು ಹೊರಟ ಅದೆಷ್ಟೂ ಜನರಿಗೆ ತನ್ನ ಕೊನೆಯ ಪ್ರವಾಸ ಎಂದು ಗೊತ್ತೇ ಇರಲಿಲ್ಲ.
ಆ ದಿನ ನಡೆದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 25ಕ್ಕು ಹೆಚ್ಚಾಗಿ ಜನ ಜೀವ ಕಳೆದುಕೊಂಡರು.
ಆ ಒಂದು ಘನಘೋರ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಕುಟುಂಬ ಸದ್ಗತಿಗಾಗಿ, ಅಭಿನವ ಭಾರತ ಸಂಘಟನೆಯಿಂದ ಗೀತಾ ತ್ರಿಷ್ಟಪ್ ಹೋಮ ಮತ್ತು ವೃತ ಬಂಧುಗಳ ಆತ್ಮ ಸದ್ಗತಿಗೆ ತಿಲ ತರ್ಪಣ ಸಮರ್ಪಣೆ ಕಾರ್ಯಕ್ರಮ ಮಲ್ಪೆಯ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ನಡೆಯಿತು.