ಮಂಗಳೂರು : ಅಪ್ಪಟ ಹಿಂದುತ್ವವಾದಿ, ಬಜರಂಗದಳ ಸಕ್ರಿಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಹತ್ಯೆ ಸಂಬಂಧಿಸಿದಂತೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಮಾನ್ಯ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ, ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳ ಬಗ್ಗೆ ಮತ್ತು ಹತ್ಯೆ ನಡೆಸಲು ರೂಪಿಸಿದ ಸಂಚಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದರಲ್ಲಿ ಶಾಂತಿಗುಡ್ಡೆ ನಿವಾಸಿ ನಟೋರಿಯಸ್ ಅಬ್ದುಲ್ ಸಫ್ವಾನ್ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಈತನ ಜೊತೆ ಶಾಂತಿಗುಡ್ಡೆ ನಿವಾಸಿ ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಆದಿಲ್ ಮೆಹರೂಫ್, ಕಳಸದ ನಾಗರಾಜ್, ರಂಜಿತ್ ಒಟ್ಟಾಗಿ ಹತ್ಯೆ ನಡೆಸಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ 2023ರಲ್ಲಿ ಸುಹಾಸ್ ಶೆಟ್ಟಿ ಸ್ನೇಹಿತ ಪ್ರಶಾಂತ್ ಶೆಟ್ಟಿ, ಈ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಸಫ್ವಾನ್ ಎಂಬಾತನನ್ನು ಮಾತುಕತೆಗೆ ಕರೆಸಿ ಚೂರಿ ಇರುದು ಹತ್ಯೆ ನಡೆಸಲು ಯತ್ನಿಸಿದ್ದ ಸಂದರ್ಭ ಸುಹಾಸ್ ಶೆಟ್ಟಿ, ಪ್ರಶಾಂತ್ ಶೆಟ್ಟಿಗೆ ಬೆಂಬಲವಾಗಿ ನಿಂತಿದ್ದ. ಮುಂದೊಂದು ದಿನ ಸುಹಾಸ್ ಶೆಟ್ಟಿ, ಸಫ್ವಾನ್ ಹತ್ಯೆ ನಡೆಸುತ್ತಾನೆ ಎಂಬ ಭಯದಿಂದ ಸಫ್ವಾನ್, ನಿಯಾಜ್ ಒಟ್ಟಿಗೆ ಸೇರಿ ಸುಹಾಸ್ ನ ಹತ್ಯೆಗೆ ಪ್ಲಾನ್ ಮಾಡಿದ್ದರು.
ನಂತರ ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ನ ತಮ್ಮ ಆದಿಲ್ ಎಂಬಾತನನ್ನು ಭೇಟಿಯಾಗಿ ಸುಹಾಸ್ ನನ್ನು ಮುಗಿಸುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಫೈನಾನ್ಸ್ ಮಾಡಿದ ಆದಿಲ್ 5 ಲಕ್ಷ ರುಪಾಯಿ ಸುಪಾರಿ ನೀಡುವುದಾಗಿ ಒಪ್ಪಿಕೊಂಡು, ಅದರಂತೆ 3 ಲಕ್ಷ ಅಡ್ವಾನ್ಸ್ ಕೂಡ ನೀಡಿದ್ದಾನೆ.
ಇದಾದ ಮೇಲೆ ಸಫ್ವಾನ್ ಮತ್ತು ನಿಯಾಜ್ ಸೇರಿಕೊಂಡು ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಆದಿಲ್ ಮೆಹರೂಫ್ ಜೊತೆ ಮಾತನಾಡಿ ಸುಹಾಸ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದರು. ಹೀಗೆ, ಇದಕ್ಕೆ ಬೇಕಾದ ಮಾರಕಾಸ್ತ್ರಗಳಿಗೆ ಮತ್ತು ಹತ್ಯೆಗೆ ಇನ್ನೂ ಜನ ಬೇಕೆಂದು ನಿಜಾಝ್ ತನ್ನ ಕಳಸದ ಸ್ನೇಹಿತರಾದ ನಾಗರಾಜ್ ಮತ್ತು ರಂಜಿತ್ ನನ್ನು ಸಂಪರ್ಕಿಸಿದ್ದು, 2 ದಿನಗಳ ಹಿಂದೆ ಅವರು ಮಂಗಳೂರಿಗೆ ಬಂದು ಸಫ್ವಾನ್ ಮನೆಯಲ್ಲೇ ಇದ್ದರು. ಮೇ 1ರಂದು ಕೊಲೆ ಮಾಡುವುದಾಗಿಯೇ ಫಿಕ್ಸ್ ಆದ ಸಫ್ವಾನ್ ಆಂಡ್ ಟೀಮ್ ಆ ದಿನ ಬೆಳಗ್ಗಿನಿಂದಲೇ ಸುಹಾಸ್ ಚಲನವಲನಗಳನ್ನು ಗಮನಿಸಿ ಬಜಪೆ ಕಿನ್ನಿಕಂಬಳ ಬಳಿ ಮೀನಿನ ಲಾರಿಯಿಂದ, ಸುಹಾಸ್ ನ ಇನ್ನೋವಾ ಗಾಡಿಗೆ ಢಿಕ್ಕಿ ಹೊಡೆದು ಆತನನ್ನು ಬೆನ್ನಟ್ಟಿ ಭರ್ಭಾರವಾಗಿ ಹತ್ಯೆ ನಡೆಸಿದ್ದಾರೆ.
ಈ ನಟೋರಿಯಸ್ ಗ್ಯಾಂಗ್ ಗೆ ಮುಖ್ಯವಾಗಿ ಸುಪಾರಿ ನೀಡಿದವ ಆದಿಲ್ ಎಂದು ತಿಳಿದುಬಂದಿದೆ. ಈತ 5 ಲಕ್ಷ ನೀಡುವುದಾಗಿ ಒಪ್ಪಿ, 3 ಲಕ್ಷ ಅಡ್ವಾನ್ಸ್ ನೀಡಿ ಉಳಿದ ಹಣ ಹತ್ಯೆಯ ನಂತರ ನೀಡುವುದಾಗಿ ಒಪ್ಪಿಕೊಂಡಿದ್ದ. ಈ ಆದಿಲ್ ಎಂಬಾತ ಈ ಹಿಂದೆ ಸುರತ್ಕಲ್ ನ ಕೈಕಂಬ, ಗಣೇಶಪುರ ಗಣಪತಿ ದೇವಸ್ಥಾನದ ಬಳಿ ಹಿಂದೂ ಕಾರ್ಯಕರ್ತ ಒಬ್ಬರ ಹತ್ಯೆಗೆ ಯತ್ನಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.