ಲಕ್ ಅನ್ನೋದು ಒಮ್ಮೆ ಹೊಡೆದ್ರೆ ಅದೃಷ್ಟ ಲಕ್ಷ್ಮೀಯೇ ಕಾಲು ಮುರಿದುಕೊಂಡು ಮನೆಯೊಳಗೆ ಬೀಳಬೇಕು ಹಾಗೆ ಹೊಡೆಯುತ್ತೆ. ಅದೃಷ್ಟವೇ ಹಾಗೆ ಯಾವುದೇ ಸೂಚನೆ ಕೊಡದೆ ನುಸುಳಿಕೊಂಡು ಬದುಕಿನೊಳಕ್ಕೆ ಬಂದು ನಮಗೆ ಸರ್ಪ್ರೈಸ್ ಕೊಡುತ್ತೆ. ಹೀಗೆ ಅದೃಷ್ಟ ದೇವತೆ ಏಕಾಏಕಿ ಮನೆಗೆ ಬಂದ ಪರಿಣಾಮ ಭಾರತೀಯ ಮೂಲದ ಸಿಂಗಾಪೂರ್ ನಿವಾಸಿ ರಾತ್ರೋ ರಾತ್ರಿ ಕರೋಡಪತಿಯಾಗಿದ್ದಾರೆ.
ತನ್ನ ಹೆಂಡತಿಗೆ ಚಿನ್ನ ಖರೀದಿಸಿದ ಜ್ಯುವೆಲ್ಲರಿ ಮಳಿಗೆಯಲ್ಲಿ ನಡೆದ ಲಕ್ಕಿ ಡ್ರಾ ದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ 8 ಕೋಟಿ ಹಣ ಸಿಕ್ಕಿದೆ.
ಸಿಂಗಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಪ್ರೊಜೆಕ್ಟ್ ಎಂಜಿನಿಯರ್ ಆಗಿರುವ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಎನ್ನುವ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಯುಎಸ್ ಡಾಲರ್ ಹಣ (₹8ಕೋಟಿಗೂ ಅಧಿಕ) ದಕ್ಕಿದೆ.
ಬಾಲಸುಬ್ರಹ್ಮಣ್ಯಂ ಅವರು ಸಿಂಗಪುರದ ಪ್ರಸಿದ್ದ ಮುಸ್ತಫಾ ಜುವೇಲರಿಯಲ್ಲಿ ಪತ್ನಿಗಾಗಿ ₹84 ಸಾವಿರ ಮೌಲ್ಯದ ಚಿನ್ನದ ಸರವನ್ನು ಖರೀದಿಸಿದ್ದರು. ಇದೇ ವೇಳೆ ಅಂಗಡಿಯಲ್ಲಿ ಚಿನ್ನ ಖರೀದಿಸಿದವರಿಗೆ ಲಕ್ಕಿ ಡ್ರಾ ಬಹುಮಾನ ನಡೆಯುತ್ತಿತ್ತು. ಅದೃಷ್ಟದಿಂದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಅವರು ಡ್ರಾದಲ್ಲಿ ಗೆದ್ದಿದ್ದಾರೆ. ಈ ವಿಚಾರವನ್ನು ಮುಸ್ತಫಾ ಜುವೇಲರಿ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
ಇನ್ನು ಲಕ್ಕಿ ಡ್ರಾನಲ್ಲಿ 8 ಕೋಟಿ ರೂಪಾಯಿ ವಿಜೇತರಾಗಿ ಹೊರಹೊಮ್ಮಿದ ಚಿದಂಬರಂಗೆ ಮುಕಸ್ತಾಫಾ ಜ್ಯುವೆಲರ್ಸ್ ವಿಡಿಯೋ ಕಾಲ್ ಮಾಡಿ ಶುಭಾಶಯ ತಿಳಿಸಿದಾಗ ಅವರು ಭಾವುಕರಾಗಿ ಹೋಗಿದ್ದರು. ಇಂದು ನನ್ನ ತಂದೆಯ ನಾಲ್ಕನೇಯ ಪುಣ್ಯಾರಾಧನೆ ಇಂದೇ ನನಗೆ ಈ ಪ್ರೈಜ್ ಬಂದಿದ್ದ ಸಾಕಷ್ಟು ಖುಷಿಯನ್ನು ತಂದಿದೆ. ಇದು ನನ್ನ ತಂದೆಯ ಆಶೀರ್ವಾದ ಎಂದು ನಾನು ತಿಳಿದಿದ್ದೇನೆ ಎಂದು ಹೇಳಿದ್ದಾರೆ.