Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಉಡುಪಿ: ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಉಡುಪಿ : ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಟಪಾಟಿಯಲ್ಲಿ ಜನವರಿ 1ರಂದು ನಡೆದಿದೆ.

ಕಟಪಾಡಿಯ ಪಳ್ಳಿಗುಡ್ಡೆ ನಿವಾಸಿ ದೀಪಕ್ ಆರ್(34) ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ.

ಜನವರಿ 1 ರಂದು ದೀಪಕ್ ತನ್ನ ಕೋಣೆಯಲ್ಲಿ ಕಬ್ಬಿಣದ ಕೊಕ್ಕೆಯಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ. ದೀಪಕ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ದೀಪಕ್ ಉಡುಪಿಯ ಕಲ್ಸಂಕ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ತಮ್ಮ ಸರಳ ಸ್ವಭಾವ ಮತ್ತು ಸ್ನೇಹಪರ ನಡವಳಿಕೆಗೆ ಹೆಸರಾಗಿರುವ ದೀಪಕ್ ಅವರು ಅವಿವಾಹಿತರಾಗಿದ್ದರು. ಇನ್ನು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Related posts

Leave a Comment