ವಿಶ್ವದಾದ್ಯಂತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್) ಇಂದಿನಿಂದ ರಂಗೇರಿದೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ನ ಮೊದಲ ಪಂದ್ಯದಲ್ಲಿ ಕೆ.ಕೆ.ಆರ್. ವಿರುದ್ಧವಾಗಿ ಆರ್.ಸಿ.ಬಿ. ತಂಡ ಭರ್ಜರಿ ಜಯ ದಾಖಲಿಸಿದೆ.
ಐ.ಪಿ.ಎಲ್. 18ನೇ ಆವೃತ್ತಿಯ ಉದ್ಘಾಟನೆಯಲ್ಲಿ ಕೆ.ಕೆ.ಆರ್. ತಂಡದ ಮಾಲಿಕ ಬಾಲಿವುಡ್ ನಟ ಶಾರುಕ್ ಖಾನ್, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಹಿನ್ನಲೆ ಗಾಯಕಿ ಶ್ರೇಯಾ ಗೋಶಲ್ ಇನ್ನೂ ಮುಂತಾದ ತಾರೆಗಳು ಉಪಸ್ಥಿತರಿದ್ದರು.
ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ ಕೋಲ್ಕತ್ತಾ ತಂಡವು 175 ರನ್ ಗಳ ಗುರಿ ನೀಡಿತ್ತು. ಕೋಲ್ಕತ್ತಾ ಪರವಾಗಿ ಅಜಿಂಕ್ಯಾ ರಹಾನೆ 56 ರನ್ ಗಳ ಭರ್ಜರಿ ಬ್ಯಾಟಿಂಗ್ ನಡೆಸಿದರು, ಮತ್ತು ಬೆಂಗಳೂರು ಪರವಾಗಿ ಕ್ರುನಲ್ ಪಾಂಡ್ಯ 3 ವಿಕೆಟ್ ಕಬಳಿಸಿದರು.
175 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಫಿಲಿಪ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಸೇರಿ ಮೊದಲ ವಿಕೆಟ್ ಗೆ 95 ರನ್ ಗಳ ಜೊತೆಯಾಟ ಆಡಿದರು. ಫಿಲಿಪ್ ಸಾಲ್ಟ್ 56 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಅಜೇಯರಾಗಿ 59 ರನ್ ಬಾರಿಸಿ, 16 ಓವರ್ 2 ಬಾಲ್ ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿತು. ಈ ಮೂಲಕ ಆರ್.ಸಿ.ಬಿ ತಂಡಕ್ಕೆ 18 ನೇ ಆವೃತ್ತಿಯ ಮೊದಲ ಜಯ ಇದಾಗಿದೆ.