ಗಾರ್ಡನ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ, ಮನೆ ಅಂಗಳದಲ್ಲಿ ಒಂದಿಷ್ಟು ಹೂವಿನ ಗಿಡಗಳು ಇರಬೇಕೆಂದು ಬಯಸುತ್ತಾರೆ. ಈ ಹೂವಿನ ಗಿಡಗಳನ್ನು ಆರೈಕೆ ಮಾಡಿಕೊಂಡು ದಿನಗಳೆಯುವುದೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಹೂದೋಟದ ಬಗ್ಗೆ ಗಮನಕೊಡುತ್ತಾರೆ.
ಆದರೆ ಇಂದಿನ ಬ್ಯುಸಿ ಜೀವನದಲ್ಲಿ, ಮತ್ತು ನಗರ ಪ್ರದೇಶದ ಅಂಗೈ ಅಗಲದ ಜಾಗದಲ್ಲಿ ಗಾರ್ಡನ್ ಮಾಡುವುದು ಸಾವಲಿನ ಕೆಲಸ. ಆದರೆ ಕೆಲವೊಂದು ವಿಷಯವನ್ನು ತಿಳಿದುಕೊಂಡು ಅಲ್ಪ ಜಾಗದಲ್ಲಿ ಸುಂದರವಾದ ಗಾಡರ್ನ್ ಮಾಡಬಹುದು.
ಅದಕ್ಕೆಂದೇ ಹೆಚ್ಚಿನ ಮನೆಗಳಲ್ಲಿ ಇಂಡೋರ್ ಗಾರ್ಡನ್, ವಾಟರ್ ಗಾರ್ಡನ್, ವರ್ಟಿಕಲ್ ಗಾರ್ಡನ್ ಹೀಗೆ ಹಲವಾರು ಗಾರ್ಡನ್ ಶೈಲಿಗಳು ನಗರ ಪ್ರದೇಶದ ಮನೆ, ಆಪಾರ್ಟ್ಮೆಂಟ್‌ಗಳಿಗೆ ಸೂಕ್ತವೆನಿಸುತ್ತದೆ. ಅದೇ ರೀತಿಯಲ್ಲಿ ಮತ್ತೊಂದು ಗಾರ್ಡನ್ ಅಂದರೆ ಅದು ಮಿನಿಯೇಚರ್ ಗಾರ್ಡನ್..!
ಅಂಗೈ ಅಗಲದ ಜಾಗದಲ್ಲಿ ಪುಟ್ಟ ಪುಟ್ಟ ಹೂಕುಂಡಗಳಲ್ಲಿ ಹೂವಿನ ಗಿಡ ನೆಟ್ಟು ಎಲ್ಲರನ್ನು ಆಕರ್ಷಿಸುವಂತೆXZ
*ಮಾಡುವುದು ಈ ಗಾರ್ಡನ್ ಶೈಲಿಯ ವಿಶೇಷತೆ. ಸಣ್ನ ಪಾಟ್‌ಗಳಲ್ಲಿ ಸಣ್ನ ಗಿಡ ನೆಟ್ಟು ನಿಮ್ಮ ಗಾರ್ಡನ್ ಅನ್ನೂ ಆಕರ್ಷಿಸುವಂತೆ ಮಾಡಲು ಇಲ್ಲಿವೆ ಕೆಲವು ಟಿಪ್ಸ್.
- ಆಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರು ಈ ರೀತಿಯ ಮಿನಿಯೇಚರ್ ಗಾರ್ಡನ್ ಮಾಡಿದರೆ ಜಾಗದ ಉಳಿತಾಯವಾಗುತ್ತದೆ.
- ಸಣ್ಣ ಸಣ್ಣ ಪಾಟ್‌ಗಳು ಮಾರ್ಕೆಟ್‌ನಲ್ಲಿ ಲಭ್ಯವಿರುವುದಿಲ್ಲ. ಬದಲಾಗಿ ಸಣ್ಣ ಬಾಕ್ಸ್, ಡಬ್ಬ, ಕ್ರೀಂ ಕಪ್‌ಗಳನ್ನು ಹೂಕುಂಡವಾಗಿ ಪರಿವರ್ತಿಸಿಕೊಳ್ಳಬಹುದು.
- ಸಣ್ಣ ಹೂಕುಂಡಗಳಲ್ಲಿ ನೆಡುವ ಗಿಡವೂ ಸಹ ಆದಷ್ಟು ಚಿಕ್ಕದಿದ್ದರೆ ಬಲು ಒಳ್ಳೆಯದು.
- ಈ ಸಣ್ಣ ಹೂಕುಂಡದಲ್ಲಿ ಹೂಬಿಡುವ ಗಿಡಗಳೂ ಸಹ ಸಣ್ಣಗೆ ಇರಲಿ.
- ಹಳೆಯ ಬಾಟಲ್, ಕಪ್‌ಗಳನ್ನು ಕಟ್ ಮಾಡಿ, ಬುಡ ತೂತು ಮಾಡಿ ಹೂಕುಂಡ ರಚಿಸಿ. ರಚಿಸಿದ ನಂತರ ಇನ್ನಷ್ಟು ಚಂದ ಕಾಣಲು ಪೈಂಟ್ ಹಚ್ಚಿ.
- ಈ ರೀತಿ ಹೂವಿನ ಗಿಡ ನೆಡುವಾಗ ಮಣ್ಣಿನ ಜೊತೆ ಮರಳು, ಅಲ್ಪ ಪ್ರಮಾಣದಲ್ಲಿ ಗೊಬ್ಬರ ಮಿಶ್ರಣ ಇದ್ದರೆ ಒಳಿತು.
ಇಂಡೋರ್‌ಗಳಲ್ಲಿ ಬೆಳೆಸಬಹುದಾದ ಗಿಡಗಳನ್ನು ಮಿನಿಯೇಚರ್ ಗಾರ್ಡನ್‌ನಲ್ಲಿಯೂ ಇರಲಿ. ಇದರಿಂದ ಒಳಾಂಗಣದಲ್ಲೂ ಅಲ್ಪ ಜಾಗದಲ್ಲೂ ಗಾರ್ಡನ್ ಮಾಡಬಹುದು. - ಈ ಹೂಕುಂಡಗಳನ್ನು ಸ್ಟೆಪ್‌ವೈಸ್ ಇಟ್ಟರೆ ಬಲು ಆಕರ್ಷಕವಾಗಿ ಕಾಣಿಸುತ್ತದೆ.
- ಈ ಹೂ ಕುಂಡಗಳನ್ನು ಟೇಬಲ್, ಕಿಟಕಿ ಪಕ್ಕದಲ್ಲಿ ಇಟ್ಟರೆ ಚಂದ ಕಾಣುತ್ತದೆ.
- ಈ ಕುಂಡಗಳಿಗೆ ಆದಷ್ಟು ಕಡಿಮೆ ಬೆಳಕು ಬೀಳುವ ಹಾಗೆ ನೋಡಿಕೊಳ್ಳಿ.
- ಈ ಗಾರ್ಡನ್ ಇನ್ನಷ್ಟು ಸುಂದರವಾಗಿ ಕಾಣಲು ಸಣ್ಣ ಮನೆಗಳು, ಪ್ರಾಣಿ ಪಕ್ಷಿಗಳನ್ನಿ ಇದರ ಜೊತೆಗೆ ಇರಿಸಿ.
- ಸಣ್ಣ ಪಾಟ್‌ನಲ್ಲಿ ಎರಡು ಮೂರು ಬಗೆಯ ಸಣ್ಣ ಗಿಡಗಳನ್ನು ನೆಟ್ಟರೆ ಸುಂದರವಾಗಿ ಕಾಣುತ್ತದೆ.
- ಈ ಕುಂಡಗಳ ಮೇಲ್ಭಾಗಕ್ಕೆ ಸಣ್ಣ ಕಲ್ಲುಗಳನ್ನು ಇರಿಸಿ ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.
ಹೀಗೆ ನಿಮ್ಮದೇ ಶೈಲಿಯ ಗಾಡರ್ನ್ನನ್ನೂ ನೀವು ತಯಾರಿಸಿಕೊಳ್ಳಿ. ಇಷ್ಟು ಮಾತ್ರವಲ್ಲದೆ ನಿಮ್ಮ ಕ್ರಿಯಾತ್ಮಕತೆಯನ್ನು ಸೇರಿಸಿ ಇನ್ನಷ್ಟು ಚೆಂದಗೊಳಿಸಿ ಅಲ್ಪ ಜಾಗದಲ್ಲಿ ಅಂದವಾದ ಹೂದೋಟ ರಚಿಸಿ..