ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ 6ನೇ ವರ್ಷದ “ಭಕ್ತಿ ಧರ್ಮದ ನಡೆ” ಬೃಹತ್ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನ.03ರ ಆದಿತ್ಯವಾರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಶ್ರೀ ಶ್ರೀ ಶ್ರೀ ವಿದ್ಯೆಂದ್ರ ತೀರ್ಥ ಶ್ರೀ ಪಾದರು, ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠ ಇವರ ಶುಭಾರ್ಶಿವಾದದೊಂದಿಗೆ ಭಕ್ತಿ ಧರ್ಮದ ನಡೆ ಎಂಬ ಪುಣ್ಯ ಕಾರ್ಯವನ್ನು ಸತತ ಆರು ವರ್ಷಗಳಿಂದ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಸರ್ವ ಜನರ ಸಕಲ ಕಷ್ಟಗಳು ಪರಿಹಾರ, ಲೋಕ ಕಲ್ಯಾಣಾರ್ಥವಾಗಿ ಪರಮ ಪಾದದಿಂದ ಮೂಲ ಪಾದದೆಡೆಗೆ ಶ್ರೀಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಈ ಪಾದಯಾತ್ರೆ ನಡೆಯಲಿದೆ.
ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ನಡೆದು ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. 6ನೇ ವರ್ಷದ ಭಕ್ತಿ ಧರ್ಮದ ನಡೆ ದಿನಾಂಕ 22-12-2024ರ ಭಾನುವಾರ ನಡೆಯಲಿದೆ.
ಮಂಜಣ್ಣ ಸೇವಾ ಬ್ರಿಗೇಡ್. ಹಿಂದು ಸಮಾಜ ಮತ್ತು ಹಿಂದುತ್ವಕ್ಕಾಗಿ ಜೀವನವನ್ನೇ ಧಾರೆ ಎರೆದಿದ್ದ ಮಂಜುನಾಥ್ ಅವರ ನೆನಪಿನಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಇದುವರೆಗೆ ಹಲವಾರು ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಹಲವು ಕುಟುಂಬಗಳಿಗೆ ನೆರವು ನೀಡಿದೆ. ಮೂಲತಃ ಉಳ್ಳಾಲ ಬೈಲಿನಲ್ಲಿ ಜನಿಸಿದ ಮಂಜುನಾಥ್ ಅವರು ಗಣೇಶ್ ಹಾಗೂ ರಾಜಮ್ಮ ದಂಪತಿಗಳ ಮಗ. ಸಕ್ರಿಯವಾಗಿ ಹಿಂದೂ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಿಂದೂ ಸಂಘಟನೆ ಎಂದರೆ ಅದು ಕ್ರಾಂತಿ ಮಾತ್ರವಲ್ಲ ಸಮಾಜದ ಬಡವರ ಕಷ್ಟಕ್ಕೆ ಸ್ಪಂದನೆ ನೀಡುವುದು ಕೂಡ ಎನ್ನುವಂತ ಮನೋಭಾವ ಹೊಂದಿದ ಮಂಜುನಾಥ್ ಅವರು ಎಷ್ಟೋ ಹಿಂದೂ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದರು.
ಉಳ್ಳಾಲದ ನರಸಿಂಹ ಶೆಟ್ಟಿಗಾರ್ ಕೊಲೆಯಾದ ಸಂದರ್ಭ ತಕ್ಕ ಉತ್ತರ ನೀಡಿ ಹಿಂದೂ ಸಮಾಜ ಜಾಗೃತವಾಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಕ್ಷಣೆ ನೀಡುವವರಿಗೆ ರಕ್ಷಣೆ ಇಲ್ಲವೆಂದಾಗ ಬಲಿದಾನ ವ್ಯರ್ಥವಾಗಬಾರದು, ಪ್ರತಿಯೊಬ್ಬ ರಕ್ಷಕನನ್ನೂ ರಕ್ಷಿಸುವುದು ಜವಾಬ್ದಾರಿಯಾಗಿದೆ. ಹಿಂದೂ ರಕ್ಷಕರು ಹಾಗೂ ಅವರ ಮನೆಯವರ ರಕ್ಷಣೆಗೆ ಒಗ್ಗಟ್ಟಾಗಬೇಕು ಎಂಬ ಧ್ಯೇಯ ಅಂದೇ ಜಾಗೃತವಾಗಿತ್ತು. ಹಾಗೇ ಎಷ್ಟೋ ದಾರಿ ತಪ್ಪುತ್ತಿದ್ದ ಯುವಕರಿಗೆ ಹಿಂದುತ್ವ ಬಗ್ಗೆ ತಿಳಿಸಿ ದಾರಿ ತೋರಿಸಿಕೊಟ್ಟಿದ್ದು ಅಂದಿನಿ0ದಲೇ ಹಿಂದೂ ಸಮಾಜದ ಏಳಿಗೆಗಾಗಿ ಹಾಗೂ ಜಾಗೃತಗೊಳಿಸುವ ಮನೋಭಾವ ಹೊಂದಿದ್ದರು. ಯಾವುದೇ ಪ್ರಚಾರವಿಲ್ಲದೆ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು.
ಮAಜುನಾಥ್ ಅವರ ಅಗಲುವಿಕೆಯ ನಂತರ ಅವರ ಧ್ಯೇಯವನ್ನು ನನಸಾಗಿಸಲು ಹುಟ್ಟಿಕೊಂಡ ಸಂಸ್ಥೆ ಇಂದು ಬೆಳೆದು ಹೆಮ್ಮರವಾಗಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಮಡಿವಾಳ ಅವರ ಕುಟುಂಬಕ್ಕೆ ಧನಸಹಾಯ ಹಸ್ತ ಚಾಚುವ ಮೂಲಕ ಶುರುವಾದ ಈ ಸಂಸ್ಥೆ ಇಂದು ನೂರಾರು ಕುಟುಂಬಗಳಿಗೆ ಆಸರೆಯಾಗಿದೆ. ಅಶಕ್ತ ಕುಟುಂಬಗಳಿಗೆ ಸಹಾಯ, ಮನೆ ನಿರ್ಮಾಣ, ಮದುವೆಗೆ ಸಹಾಯ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಹೀಗೆ ಹಿಂದೂ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯಾಗಿದೆ.
ದೇಶಕ್ಕಾಗಿ ಬಲಿದಾನಗೈದ ಶಿವಾಜಿ, ಭಗತ್ ಸಿಂಗ್ ಹೀಗೆ ನೂರಾರು ಮಂದಿಯ ಹೆಸರು ಹೇಳುತ್ತೇವೆ. ಆದರೆ ಹಿಂದೂ ಧರ್ಮದ ರಕ್ಷಣೆಗೆ ಬಲಿಯಾದವರು ಮಂಜಣ್ಣ. ಅವರ ಅಂದಿನ ಉದ್ದೇಶ ನೆನಪಿಟ್ಟು ಮುಂದುವರಿಸಿಕೊAಡು ಬರುತ್ತಿರುವ ಸಂಘಟನೆಯೇ ಮಂಜಣ್ಣ ಸೇವಾ ಬ್ರಿಗೇಡ್.
ಮಂಜುನಾಥ್ ಅವರು ವಿಧಿವಶವಾದ ದಿನ ಪ್ರತಿ ವರ್ಷ ನೆನಪಿಗಾಗಿ ಆಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ವರ್ಷ ಲೋಕ ಕಲ್ಯಾಣಾರ್ಥವಾಗಿ ಪರಮ ಪಾದದಿಂದ ಮೂಲ ಪಾದದೆಡೆಗೆ ಎಂಬ ಹೆಸರಿನಲ್ಲಿ ಶ್ರಿಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರಿಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ನಡೆಯುತ್ತಿದೆ.
ಈ ವೇಳೆ ಮಾತನಾಡಿದ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದರು, ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಹಿಂದೂ ಧರ್ಮದ ರಕ್ಷಣೆಗೆ ಕಾರ್ಯ ಮಾಡುತ್ತಾ ಬರುತ್ತಿದೆ. ಸಂಘಟನೆಯನ್ನು ಜಾಗೃತಿ ಮೂಡಿಸಿ, ಒಗ್ಗಟಿನಲ್ಲಿರುವ ಉದ್ದೇಶದಿಂದ ಉತ್ತಮ ಕಾರ್ಯ ಮಾಡುತ್ತಿದೆ. ದೇಶಭಕ್ತರು, ದೇವ ಭಕ್ತರು ಸೇರಿಕೊಂಡು ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಧರ್ಮ ವಿರೋಧಿಗಳನ್ನು ಪ್ರಬಲವಾಗಿ ವಿರೋಧಿಸಬೇಕಾಗಿದೆ. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಆಗುತ್ತಿದೆ. ಕಷ್ಟದಲ್ಲಿರುವವರ ಸೇವೆಯೇ ದೇವರ ಸೇವೆ ಎಂದು ಧರ್ಮ ತಿಳಿಸಿಕೊಡುತ್ತದೆ. ಅಶಕ್ತರ ಪಾಲಿಗೆ ಸಂಸ್ಥೆಎನೆರವಾಗುತ್ತಿದೆ. ವಿವಿಧ ರೀತಿಯಲ್ಲಿ ಸಹಾಯ ಹಸ್ತ ಮಾಡುತ್ತಿದೆ. ಮಠ ಮಂದಿರಗಳು ಮಾಡುವಂತ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇದು ದೊಡ್ಡ ಜವಾಬ್ದಾರಿ ಹಾಗೂ ಸಾಧನೆಯಾಗಿದೆ. ಎಲ್ಲ ಕಾರ್ಯಕರ್ತರಿಗೂ ಹಾಗೂ ನೂತನ ಪದಾಧಿಕಾರಿಗಳು ಅಭಿನಂದನೆಗಳು. ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿ ಎಂದು ಹೇಳಿದರು.
ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಆರು ವರ್ಷಗಳಿಂದ ಭಕ್ತಿ ಧರ್ಮದ ನಡೆ ಪಾದಾಯಾತ್ರೆ ನಡೆಸಿಕೊಂಡು ಬರುತ್ತಿದೆ. ಇಂದು ಸಂಕಷ್ಟದಲ್ಲಿ ಸನಾತನ ಧರ್ಮ ಇದೆ. ಧರ್ಮ ಅಪಾಯದಲ್ಲಿದೆ. ಇಂತಹ ಕಾಲಘಟ್ಟದಲ್ಲಿ ಧರ್ಮ ರಕ್ಷಣೆ ಕಾನೂನಿನಿಂದ ಮಾತ್ರ ಸಾಧ್ಯ ಇಲ್ಲ. ಇಂತಹ ಸಂಘಟನೆಯಿ0ದ ಧರ್ಮದ ರಕ್ಷಣೆ ಸಾಧ್ಯ. 15 ವರ್ಷಗಳಿಂದ ಅಶಕ್ತ ಹಿಂದೂ ಬಾಂಧವರಿಗೆ ಸಹಾಯಹಸ್ತ ಚಾಚುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ. ಇದು ಸನಾತನ ಧರ್ಮದ ಸೇವೆಯಾಗಿದೆ. 6 ನೇ ವರ್ಷದ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರು, ಹಿಂದೂ ಜಾಗರಣ ವೇದಿಕೆ ಪ್ರಮುಖರು ಕಿಶೋರ್ ಕುಮಾರ್ ಮಾತನಾಡಿ ಮಂಗಳೂರಿನ ಹಿಂದುತ್ವ ಸಾಮಾನ್ಯ ಹಿಂದುತ್ವವಲ್ಲ. ಮಂಗಳೂರು ಹಿಂದುತ್ವದ ಭದ್ರಕೋಟೆ. ಇಲ್ಲಿನ ಕಾರ್ಯಕರ್ತರು ಪ್ರಾಣವನ್ನೂ ತ್ಯಾಗ ಮಾಡಲು ಸಿದ್ಧ. ಹಿಂದುತ್ವಕ್ಕಾಗಿ ಹಲವಾರು ಮಂದಿ ಬಲಿದಾನ ಮಾಡಿದ್ದಾರೆ. ಅಂತಹವರಲ್ಲಿ ಮಂಜುನಾಥ್ ಕೂಡ ಒಬ್ಬರು. ಮಂಜಣ್ಣ ಅವರು ಹಿಂದೂ ಸಮಾಜಕ್ಕೆ ಶಕ್ತಿ. ಕಷ್ಟ ನಿವಾರಣೆಗಾಗಿ ಕೆಲಸ ಮಾಡಿದವರು. ಅವರ ಬಲಿದಾನ ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿದೆ. ಮನೋಜ್ ಕೋಡಿಕೆರೆ ಅವರು ಕಾರ್ಯಕರ್ತರನ್ನು ಒಟ್ಟು ಸೇರಿಸಿ ಪಾದಾಯಾತ್ರೆ ಹಮ್ಮಿಕೊಂಡಿದ್ದಾರೆ. ಇಂದು ಹಿಂದೂ ವಿರೋಧಿ ಶಕ್ತಿಗಳು ಹೇಗೆಲ್ಲಾ ಮಾಡುತ್ತಿದೆ ಎಂಬುವುದು ಗೊತ್ತೇ ಇದೆ. ಸನಾತನ ಧರ್ಮವನ್ನು ಒಳಿಸಲು ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದರು.
ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ನೂತನ ಪದಾಧಿಕಾರಿಗಳ ಪಟ್ಟಿ::
ಗೌರವಾಧ್ಯಕ್ಷರು: ಹರೀಶ್ ಸಫಲ್ಯ, ಅಧ್ಯಕ್ಷರು: ರಂಜಿತ್ ಶೆಟ್ಟಿ, ಕಾರ್ಯದರ್ಶಿ: ಗಂಗಾಧರ್ ಶೆಟ್ಟಿ, ಜೊತೆ ಕಾರ್ಯದರ್ಶಿ: ಆದಿ ನೇತಾಜಿ ನಗರ, ಕೋಶಾಧಿಕಾರಿ: ರೇವಂತ್ ಮಂಗಳೂರು, ಜೊತೆ ಕೋಶಾಧಿಕಾರಿ: ಕೀರ್ತನ್ ಆಳ್ವ, ಉಪಾಧ್ಯಕ್ಷರು: ಲಕ್ಷ್ಮೀಶ್ ಕೋಡಿಕೆರೆ, ಮಾಧ್ಯಮ ಪ್ರಮುಖ್: ನಾಗೇಶ್ ಶೆಟ್ಟಿ ತೋಕೂರು, ಸಾಮಾಜಿಕ ಜಾಲತಾಣ: ವಿಜಿತ್ ಕಾಟಿಪಳ್ಳ, ದೀಕ್ಷಿತ್ ಶೆಟ್ಟಿ ತೋಕೂರು, ಸಂಘಟನಾ ಕಾರ್ಯದರ್ಶಿ : ರಮಾನಾಥ್ ಕೋಡಿಕೆರೆ, ಗೌರವ ಸಲಹೆಗಾರರು :
ಭಾಸ್ಕರ ಶೆಟ್ಟಿ, ವಸಂತ್ ಹೊಸಬೆಟ್ಟು, ನಿತೇಶ್ ಸನಿಲ್, ಶಶಿಧರ್ ಕೋಡಿಕೆರೆ, ಪ್ರಮೋದ್ ಶೆಟ್ಟಿ ತೋಕೂರು, ಕಾನೂನು ಸಲಹೆಗಾರರು: ಮಿಥೇಶ್ ಪೂಜಾರಿ, ಸುರೇಶ್ ಸಂಕಲಕರಿಯ
ಈ ಸಂದರ್ಭದಲ್ಲಿ ಶ್ರೀಯುತ ಜಯರಾಮ್ ಶೆಟ್ಟಿ ಗುತ್ತಿನಾರ್ ಕುಡುಂಬೂರು ಗುತ್ತು ಶ್ರೀ ಕ್ಷೇತ್ರ ಕಣಿಲ, ಶ್ರೀಯುತ ಮಾಧವ ಸುವರ್ಣ ತೋಕೂರು ಸ್ವಾಮಿ ಕೊರಗಜ್ಜ ಸನ್ನಿಧಿ, ಶ್ರೀಯುತ ರಮೇಶ್ ರಾವ್ ಸ್ಥಾಪಕರು ಪೆರ್ಮುದೆ ಹಿಂದೂ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆ ಕೋಡಿಕೆರೆ, ಶ್ರೀಯುತ ಪದ್ಮನಾಭ ಸುವರ್ಣ ಮೊಕ್ತೇಸರರು ಚಿತ್ರಾಪುರ ಶ್ರೀ ಮಹಾಕಾಳಿ ದೈವಸ್ಥಾನ, ಶ್ರೀಯುತ ಕಿಶೋರ್ ಕುಮಾರ್ ವಕೀಲರು ಪ್ರಮುಖರು ಹಿಂದೂ ಜಾಗರಣ ವೇದಿಕೆ, ಶ್ರೀಯುತ ಮನೋಜ್ ಕೋಡಿಕೆರೆ ಸ್ಥಾಪಕರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು, ಶ್ರೀಯುತ ವೈಶಾಕ್ ಕುಳಾಯಿ ಸುರತ್ಕಲ್ ಪ್ರಖಂಡ ಬಜರಂಗದಳ ಗೋರಕ್ಷಾ ಪ್ರಮುಖ್, ಶ್ರೀಯುತ ಪುರುಷೋತ್ತಮ್ ಬಂಗೇರ ಕಾಟಿಪಳ್ಳ ಪ್ರಮುಖರು ಹಿಂದೂ ಯುವ ಸೇನೆ, ಶ್ರೀಯುತ ಮಧುಸೂಧನ್ ಉರ್ವಸ್ಟೋರ್ ಪ್ರಮುಖರು ಶ್ರೀ ರಾಮಸೇನೆ, ಶ್ರೀಯುತ ಗಣೇಶ್ ಹೊಸಬೆಟ್ಟು ಮಾಜಿ ಮೇಯರ್ ಮಂಗಳೂರು ಮಹಾನಗರ ಪಾಲಿಕೆ, ಶ್ರೀಮತಿ ವೇದಾವತಿ ಮಾಜಿ ಉಪ ಮೇಯರ್ ಹಾಗೂ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿತೇಶ್ ತೋಕೂರು ನಿರೂಪಿಸಿದರು.