Mangalore and Udupi news
ದೇಶ- ವಿದೇಶ

Manchester : “ಕನ್ಯತ್ವ”ವನ್ನೇ ಮಾರಾಟಕ್ಕಿಟ್ಟ 18ರ ಯುವತಿ…

Manchester: ಜಗತ್ತಿನ ಪುರಾತನ ವಸ್ತುಗಳನ್ನು, ಐತಿಹಾಸಿಕ ವಸ್ತುಗಳನ್ನು ಅಥವಾ ಯಾರಾದರೂ ಪ್ರಸಿದ್ಧ ವ್ಯಕ್ತಿ ಉಪಯೋಗಿಸಿದ ವಸ್ತುಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ನಾವು ನೋಡಿದ್ದೇವೆ. ಇವುಗಳಿಗೆ ಬೆಲೆ ಕಟ್ಟಲಾಗದೆ ಕೋಟಿ ಕೋಟಿಗಳನ್ನು ಸುರಿದು ಜನರು ಕೊಂಡುಕೊಳ್ಳುವುದನ್ನು ಕೂಡ ನಾವು ಕಂಡಿದ್ದೇವೆ. ಆದರೆ ವಿಚಿತ್ರ ಎಂಬಂತೆ ಇನ್ನೊಬ್ಬಳು ಯುವತಿ ತನ್ನ ಕನ್ಯತ್ವವನ್ನೇ ಮಾರಾಟಕ್ಕೆ ಇಟ್ಟಿದ್ದಾಳೆ. ಅಷ್ಟು ಮಾತ್ರವಲ್ಲದೆ ಹಾಲಿವುಡ್ ನಟನೊಬ್ಬ 18 ಕೋಟಿ ಕೊಟ್ಟು ಅದನ್ನು ಕೊಂಡುಕೊಂಡಿದ್ದಾನೆ.

ಹೌದು, ಮ್ಯಾಂಚೆಸ್ಟರ್‌( Manchester)ನ 22 ವರ್ಷದ ವಿದ್ಯಾರ್ಥಿನಿ ಲಾರಾ ತನ್ನ ಕನ್ಯತ್ವವನ್ನ ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ನಡೆದ ಹರಾಜಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಕೊನೆಗೆ ಹಾಲಿವುಡ್ ನಟರೊಬ್ಬರು 18 ಕೋಟಿ ಬಿಡ್ ಮಾಡಿ ಗೆದ್ದಿದ್ದಾರೆ.

ಅಂದಹಾಗೆ ಹರಾಜಿನಲ್ಲಿ ಭಾಗವಹಿಸುವ ಮುನ್ನ ಲಾರಾ ಸಂಭಾವ್ಯ ಬಿಡ್ ದಾರರನ್ನು ಭೇಟಿಯಾಗಲು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಪ್ಪಂದ ಅಂತಿಮಗೊಳಿಸಿದ ನಂತರ, ಕನ್ಯತ್ವವನ್ನು ಖಚಿತಪಡಿಸಿಕೊಳ್ಳಲು ಖರೀದಿದಾರರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲಾ ಪಕ್ಷಗಳ ಗುರುತನ್ನು ರಕ್ಷಿಸಲು ಈ ಪ್ರಕ್ರಿಯೆಯನ್ನು ಗೌಪ್ಯವಾಗಿ ನಿರ್ವಹಿಸಲಾಗಿದೆ.

ಇನ್ನು ಹರಾಜು ಪ್ರಕ್ರಿಯೆ ಬಳಿಕ ಲಾರಾ ತಾನೇಕೆ ನಿರ್ಧಾರವನ್ನು ಕೈಗೊಂಡು ಎಂಬುದಾಗಿ ಬಹಿರಂಗಪಡಿಸಿದ್ದು ‘ನನಗೆ ವಿಷಾದವಿಲ್ಲ. ಹೆಚ್ಚಿನ ಎಲ್ಲ ಹುಡುಗಿಯರು ಪ್ರತಿಯಾಗಿ ಏನನ್ನೂ ಪಡೆಯದೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ನಾನು ಕನಿಷ್ಠ ಅದರ ಮೂಲಕ ನನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಿದೆ. ನಾನು ಯಾರಿಗೆ ಕನ್ಯತ್ವವನ್ನು ಕಳೆದುಕೊಳ್ಳಲಿದ್ದೇನೋ ಆತ ನನ್ನ ಶಾಶ್ವತ ಸಂಗಾತಿಯಾಗುವ ಸಾಧ್ಯತೆಯೇನೂ ಇಲ್ಲ. ಹೀಗಾಗಿ ಇದು ಜೀವಮಾನದ ಒಪ್ಪಂದವಲ್ಲ. ನಾನು ಈ ವಿಷಯದಲ್ಲಿ ತರ್ಕಬದ್ಧ ವ್ಯಕ್ತಿ. ಭಾವನೆಗಳಿಗೆ ತುತ್ತಾಗುವವಳಲ್ಲ. ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ ಎಂದಿದ್ದಾಳೆ.

Related posts

Leave a Comment