Mangalore and Udupi news
ಅಪರಾಧದೇಶ- ವಿದೇಶ

ದೆಹಲಿಯಲ್ಲಿ ಮತ್ತೆ ನಡೆದ ದೇಶವೇ ತಲೆ ತಗ್ಗಿಸುವ ಘಟನೆ. ಇನ್ಸ್ಟಾಗ್ರಮ್ ಪರಿಚಯದಿಂದ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..!

ಹೊಸದಿಲ್ಲಿ: ಇನ್ಸಾಗ್ರಾಂನಲ್ಲಿ ಪರಿಚಯವಾಗಿದ್ದ
ದೆಹಲಿಯ ಸ್ನೇಹಿತನ ಭೇಟಿಗೆಂದು ಬಂದಿದ್ದ ಬ್ರಿಟಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ದೆಹಲಿಯ ಮಹಿಪಾಲ್ಪುರದ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಸಾಮಾಜಿಕ ಜಾಲತಾಣ, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಸ್ನೇಹಿತ ಮತ್ತು ಆತನ ಸಹಚರ ಕೃತ್ಯವೆಸಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಓರ್ವ ಆರೋಪಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದರೆ, ಮತ್ತೋರ್ವನ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಬ್ರಿಟಿಷ್ ಮಹಿಳೆಯು ಆರೋಪಿಗಳಲ್ಲಿ ಓರ್ವನ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಹೊಂದಿದ್ದಳು. ಆತನನ್ನು ಭೇಟಿಯಾಗಲೆಂದು ದೆಹಲಿಗೆ ಬಂದಿದ್ದಳು.

ಘಟನೆಯ ಕುರಿತು ಬ್ರಿಟಿಷ್ ಹೈ ಕಮಿಷನ್ ಗೆ ಮಾಹಿತಿ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

ಹಿಂದೂಸ್ತಾನ್ ಟೈಮ್ಸ್ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಅತ್ಯಾಚಾರ ಆರೋಪಿ ಕೈಲಾಶ್ ಪೂರ್ವ ದೆಹಲಿಯ ಮಯೂರ್ ವಿಹಾರ್‌ನ ವಸುಂಧರ ನಿವಾಸಿಯಾಗಿದ್ದು, ಇನ್ಸಾಗ್ರಾಮ್ ರೀಲ್ಸ್ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಲಂಡನ್ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕ ಹೊಂದಿದ್ದ.

ಬ್ರಿಟಿಷ್ ಪ್ರವಾಸಿಯು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾಗ ಕೈಲಾಶ್ ನನ್ನು ಭೇಟಿಯಾಗಲು ಆಹ್ವಾನಿಸಿದ್ದರು. ಕೈಲಾಶ್ ಪ್ರತಿಯಾಗಿ ಆಕೆಯನ್ನು ದೆಹಲಿಗೆ ಬರಲು ಕೇಳಿಕೊಂಡಿದ್ದ. ಹೀಗಾಗಿ ಮಹಿಳೆ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿ ಹೋಟೆಲ್‌ನಲ್ಲಿ ತಂಗಿದರು. ಹಿಂದೂಸ್ಥಾನ್ ಟೈಮ್ಸ್ ಪ್ರಕಾರ, ಕೈಲಾಶ್ ಮತ್ತು ಅವರ ಸ್ನೇಹಿತ ವಾಸಿಮ್ ಹೋಟೆಲ್‌ನಲ್ಲಿ ಮಹಿಳೆಯನ್ನು ಭೇಟಿ ಮಾಡಿದ ನಂತರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Related posts

Leave a Comment