Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತ

ಉಡುಪಿ: 22 ಹಿರಿಯ ಕಲಾವಿದರಿಗೆ “ಯಕ್ಷಗಾನ ಕಲಾರಂಗ ಪ್ರಶಸ್ತಿ”

ಉಡುಪಿ : ಕರಾವಳಿಯ ಯಕ್ಷಗಾನ ಹಾಗೂ ಯಕ್ಷಗಾನ ಕಲಾವಿದ ಶ್ರೇಯೋಭಿವೃದ್ಧಿಗಾಗಿ ಇರುವ ಉಡುಪಿಯ ಯಕ್ಷಗಾನ ಕಲಾರಂಗ ಪ್ರತಿ ವರ್ಷ ಹಿರಿಯ ಸಾಧಕರ ಸ್ಮರಣಾರ್ಥ ಹಾಗೂ ಗೌರವಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.

ಒಟ್ಟು 22 ಮಂದಿ ತೆಂಕು ಹಾಗೂ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರನ್ನು 2024ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಪ್ರಶಸ್ತಿಗಳು ತಲಾ 20,000ರೂ. ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳ ಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ನ. 17ರಂದು ಅಪರಾಹ್ನ 3 ರಿಂದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಐವೈಸಿ ಸಭಾಂಗಣದಲ್ಲಿ ಜರಗಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ| 22 ಹಿರಿಯ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ

ಡಾ.ಬಿ.ಬಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಉಡುಪಿಯ ಎಚ್.ನಾರಾಯಣ ಶೆಟ್ಟಿ, ಪ್ರೊ. ಬಿ.ವಿ.ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ ಕೂಡ್ಲಿಯ ದೇವದಾಸ್ ರಾವ್, ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆಯ ಸುರೇಶ್ ಕುಪ್ಪೆಪದವು, ಬಿ.ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಶಿವಮೊಗ್ಗ ಜಿಲ್ಲೆ ನಾಗರಕೊಡಿಗೆಯ ಪುರಂದರ ಹೆಗಡೆ, ಕೆ.ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಉ.ಕ.ದ ಗುಂಡಿಬೈಲು ನಾರಾಯಣ ಭಟ್.

ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ ದ.ಕ.ಜಿಲ್ಲೆಯ ಅಶೋಕ ಶೆಟ್ಟಿ ಸರಪಾಡಿ, ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ ಚಿಕ್ಕಮಗಳೂರು ಜಿಲ್ಲೆ ಕಿಗ್ಗ ಹಿರಿಯಣ್ಣ ಆಚಾರ್, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ ಉ.ಕ.ಜಿಲ್ಲೆ ಥಂಡಿಮನೆ ಶ್ರೀಪಾದ್ ಭಟ್, ಶಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ ಹೆರಿಯ ನಾಯ್ಕ ಮೊಗೆಬೆಟ್ಟು, ಉಡುಪಿ ಜಿಲ್ಲೆ.

ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ ಕೆ.ಬಾಬು ಗೌಡ ತೋಡಿಕಾನ ದ.ಕ ಜಿಲ್ಲೆ, ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ ಹಾಲಾಡಿ ಕೃಷ್ಣ ಮರಕಾಲ ಉಡುಪಿ ಜಿಲ್ಲೆ, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸಿ ಕೃಷ್ಣ ಪೂಜಾರಿ ಚಕ್ರಮೈದಾನ ಉಡುಪಿ ಜಿಲ್ಲೆ, ಮಲ್ಪೆ ಶಂಕರ ನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ ಹಾವಂಜೆ ಮಂಜುನಾಥ ರಾವ್ ಉಡುಪಿ ಜಿಲ್ಲೆ, ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿ ಹೆರಂಜಾಲು ಗೋಪಾಲ ಗಾಣಿಗ ಉಡುಪಿ ಜಿಲ್ಲೆ.

ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ ರಾಧಾಕೃಷ್ಣ ನಾಕ್ ಚೇರ್ಕಾಡಿ ಉಡುಪಿ ಜಿಲ್ಲೆ, ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ ಶೇಣಿ ಸುಬ್ರಹ್ಮಣ್ಯ ಭಟ್ ಕಾಸರಗೋಡು ಜಿಲ್ಲೆ, ಕಡಂದೇಲು ಪುರುಷೋತ್ತಮ ಭಟ್ ಸ್ಮರಣಾರ್ಥ ಪ್ರಶಸ್ತಿ ಸರಪಾಡಿ ಶಂಕರನಾರಾಯಣ ಕಾರಂತ ದ.ಕ ಜಿಲ್ಲೆ. ಕಡತೋಕ ಕೃಷ್ಣ ಭಾಗವತ ಸ್ಮರಣಾರ್ಥ ಪ್ರಶಸ್ತಿ ವೆಂಕಟರಾವ್ ಹೊಡಬಟ್ಟೆ ಸಾಗರ ಶಿವಮೊಗ್ಗ ಜಿಲ್ಲೆ, ಬಿ.ಪಿ.ಕರ್ಕೇರಾ ಸ್ಮರಣಾರ್ಥ ಪ್ರಶಸ್ತಿ ರಮಾನಂದ ರಾವ್ ಕಟೀಲು ದ.ಕ ಜಿಲ್ಲೆ, ಕೆ.ಮನೋಹರ ಸ್ಮರಣಾರ್ಥ ಪ್ರಶಸ್ತಿ ನರಸಿಂಹ ಮಡಿವಾಳ ಹೆಗ್ಗುಂಜೆ ಉಡುಪಿ ಜಿಲ್ಲೆ, ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ ಅಂಬಾಪ್ರಸಾದ ಪಾತಾಳ ದ.ಕ ಜಿಲ್ಲೆ, ಶ್ರೀಮತಿ ಪ್ರಭಾವತಿ ವಿ. ಶೆಣೈ – ಯು.ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ ಗಜಾನನ ಸತ್ಯನಾರಾಣ ಭಂಡಾರಿ ಉ.ಕ ಜಿಲ್ಲೆ.

Related posts

Leave a Comment