ಪಿಲಿಕುಳ ಮೃಗಾಲಯಕ್ಕೆ ಮತ್ತೆ ಹೊಸ ಅತಿಥಿಗಳ ಆಗಮನವಾಗಿದೆ. ಸುಮಾರು 2,000 ಕಿಲೋ ಮೀಟರ್ ದೂರದಿಂದ ಹೊಸ ಅತಿಥಿಗಳು ಬಂದಿದ್ದಾರೆ. ಆ ಮೂಲಕ ಪಿಲಿಕುಳ ವನ್ಯಧಾಮಕ್ಕೆ ಹೊಸ ಮೆರುಗು ಬಂದಿದೆ.
ಮೃಗಾಲಯಕ್ಕೆ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಮತ್ತು ಅಪರೂಪದ ಪಕ್ಷಿಗಳದ ಎರಡು ಸಿಲ್ವರ್ ಫೆಸೆಂಟ್ ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್ ಗಳು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಪಿಲಿಕುಳ ಮೃಗಾಲಯಕ್ಕೆ ಆಗಮಿಸಿವೆ.
ಪಿಲಿಕುಳದಿಂದ ನಾಲ್ಕು ಕಾಡು ನಾಯಿ/ ಧೋಲ್, ಅಪರೂಪದ ನಾಲ್ಕು ರೇಟಿಕುಲೆಟೆಡ್ ಹೆಬ್ಬಾವು, ಎರಡು ಬ್ರಾಹಿಣಿ ಗಿಡುಗಗಳು, ಮೂರು ಏಶಿಯನ ಪಾಮ್ ಸಿವೇಟ, ಎರಡು ಲಾರ್ಜ್ ಇಗರೇಟ್ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುವುದು. ವಿನಿಮಯದಲ್ಲಿ ಪಿಲಿಕುಲದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಲ ಮೃಗಾಲಯದಲ್ಲೇ ಜನಿಸಿದ್ದವು.
ಮೃಗಾಲಯದಲ್ಲಿ ಜೊತೆಯಿಲ್ಲದ ಪ್ರಾಣಿಗಳಿಗೆ ಜೊತೆಗಾಗಿ ಮತ್ತು ಶುದ್ಧ ರಕ್ತ ಸಂಬAಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಿಲಿಕುಲದಲ್ಲಿ ಮೂರು ಸಿಂಹಗಳಿದ್ದು, ಜೊತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ದೂರದ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.
ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಎರಡು ಪಶುವೈದ್ಯಾಧಿಕಾರಿ ಮತ್ತು ಎಂಟು ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆ ನೋಡಿಕೊಂಡು ಆಗಮಿಸಿರುತ್ತಾರೆ. ಪ್ರಾಣಿ ವಿನಿಮಯದ ಜವಾಬ್ದಾರಿಯನ್ನು ಎರಡು ಮೃಗಾಲಯಗಳು ಸರಿ ಸಮಾನವಾಗಿ ವಹಿಸಿಕೊಳ್ಳಬೇಕಾಗುತ್ತದೆ.
ಪಿಲಿಕುಲ ಮೃಗಾಲಯವು ಸುಮಾರು 1200 ಕ್ಕೂ ಪ್ರಾಣಿ, ಪಕ್ಷಿ ಮತ್ತು ಉರಗಗಳನ್ನು ಹೊಂದಿದ್ದು ದೇಶದ 18 ಬೃಹತ್ ಮೃಗಾಲಯಗಳಲ್ಲಿ ಒಂದಾಗಿದೆ. ಪಂಜಾಬಿನ ಚಟ್ಟಬಿರ್ ಮೃಗಾಲಯ, ಬಾಂಬೆನ ಬೈಕುಳ ಮತ್ತು ಮದರಾಸ್ ಕ್ರೊಕೊಡೈಲ್ ಬ್ಯಾಂಕ್ ನಿಂದ ಪ್ರಾಣಿ, ಪಕ್ಷಿಗಳ ವಿನಿಮಯದ ಬಗ್ಗೆ ಒಪ್ಪಂದ ನಡೆಯುತ್ತಿದೆ. ವಿಶೇಷವಾಗಿ ಅನಕೊಂಡ, ಉರಗ, Humboldt ಪೆಂಗ್ವಿನ್ ಪಕ್ಷಿಗಳನ್ನು ತರಿಸಿ ಪಿಲಿಕುಳ ಮೃಗಾಲಯದಲ್ಲಿ ಜನರ ವೀಕ್ಷಣೆಗೆ ಇಡಲು ಪ್ರಯತ್ನಿಸಲಾಗುತ್ತಿದೆ.
Humboldt penguin ಗಳನ್ನು ಮೃಗಾಲಯದಲ್ಲಿ ಸಂರಕ್ಷಣೆ ಮಾಡುವುದಕ್ಕೆ, ಅವುಗಳಿಗೆ ವಿಶೇಷವಾದ ಆವರಣಗಳನ್ನು ಸೃಷ್ಟಿಸ ಬೇಕಾಗುತ್ತದೆ. ಇದಕ್ಕೆ ದುಬಾರಿ ವೆಚ್ಚ ತಗಲುವುದರಿಂದ ಕೆಲವು ದಾನಿಗಳು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿರುತ್ತಾರೆ.
ಅಪರೂಪದ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ವೀಕ್ಷಣೆಗೆ ಸೇರಿಸಿದರೆ, ಪಿಲಿಕುಲದ ಆದಾಯವು ಹಲವು ಪಟ್ಟು ಹೆಚ್ಚಾಗಿ, ಮೃಗಾಲಯವನ್ನು ಸ್ವಂತ ನೆಲೆಯಲ್ಲಿ ನಡೆಸಲು ಅನುಕೂಲವಾಗುತ್ತದೆ. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ (Quarantine Ward) ನಲ್ಲಿ ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವುದು.
ಪಿಲಿಕುಲದ ಪ್ರಾಣಿ ವಿನಿಮಯ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತೀ ದೂರದಿಂದ ಪ್ರಾಣಿಗಳನ್ನು (ಸರಿ ಸುಮಾರು 2,000 ಕಿಲೋ ಮೀಟರ್) ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದ್ದು ಇದು ಹೊಸ ದಾಖಲೆಯಾಗಿದೆ. ಈ ಹಿಂದೆ ರಾಜಸ್ಥಾನದ ಉದಯಪುರ ಮೃಗಾಲಯದಿಂದ (ಸರಿ ಸುಮಾರು 1,700 ಕಿಲೋ ಮೀಟರ್) ದೂರದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ನಡೆಸಿದ್ದು ದಾಖಲೆಯಗಿದೆ.
Mangaluru’s Pilikula Biological Park gets Asiatic lion, silver and yellow-golden pheasants
A six-year-old Asiatic lion, along with a wolf, two gharial crocodiles, and four rare birds — two silver pheasants and two yellow-golden pheasants — have arrived at the Pilikula Biological Park from the Nandankanan Zoological Park in Odisha as part of an animal exchange programme, with approval from the Central Zoo Authority.