Mangalore and Udupi news
ದೇಶ- ವಿದೇಶಪ್ರಸ್ತುತ

ಜಿಮ್‌ನಲ್ಲಿ ಕುಸಿದು ಬಿದ್ದು ಕುಸ್ತಿಪಟು ಮೃತ್ಯು

Advertisement

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಪುಣೆಯ 30 ವರ್ಷದ ಕುಸ್ತಿಪಟು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ.

ಮೃತ ಕುಸ್ತಿಪಟು ವಿಕ್ರಮ್ ಪರ್ಖಿ ಕುಸ್ತಿ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಮುಳಶಿ ತಾಲೂಕಿನ ಮಾನದಲ್ಲಿ ವಾಸವಿದ್ದ ಅವರು ಬುಧವಾರ ಬೆಳಗ್ಗೆ ತಾಲೀಮು ನಿಮಿತ್ತ ಮಾನದಲ್ಲಿರುವ ಜಿಮ್‌ಗೆ ತೆರಳಿದ್ದರು.

ವ್ಯಾಯಾಮ ಮಾಡುವಾಗ, ವಿಕ್ರಮ್ ಪರ್ಖಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಪಡೆಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ವಿಕ್ರಮ್ ಪರ್ಖಿ ಅವರು ಮಾಜಿ ಸೈನಿಕ ಶಿವಾಜಿರಾವ್ ಪರ್ಖಿ ಅವರ ಪುತ್ರ ಮತ್ತು ಯುವ ನಾಯಕ ಬಾಬಾಸಾಹೇಬ್ ಪರ್ಖಿ ಅವರ ಸಹೋದರ.

ಕಳೆದ ವರ್ಷ ಮಾರ್ಚ್ನಲ್ಲಿ ಪುಣೆಯ ಮಾಮಾಸಾಹೇಬ್ ಮೊಹಲ್ ಕುಸ್ತಿ ಸಂಕುಲ್‌ನಲ್ಲಿ ಮಾರುಂಜಿಯಲ್ಲಿ ತಾಲೀಮು ಮಾಡಿದ ನಂತರ ಕುಸ್ತಿಪಟು ಸ್ವಪ್ನಿಲ್ ಪಡಾಲೆ ಹೃದಯಾಘಾತದಿಂದ ನಿಧನರಾಗಿದ್ದರು.

Related posts

Leave a Comment