Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ ಮೇಲ್ – ಶಫಿನ್ ಹಾಗೂ ಶಿಯಾಬ್ ವಿರುದ್ಧ ಠಾಣೆ ಮೆಟ್ಟಲೇರಿದ ಯುವತಿ.!!

ಮಂಗಳೂರು: ಸಹಾಯದ ನೆಪದಲ್ಲಿ ಮನೆಗೆ ಬಂದವ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ ಬೆದರಿಕೆ ಕಾಹಿದ್ದು, ಇನ್ನೊಬ್ಬ ಲೈಂಕಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿಯೊಬ್ಬಳು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಜು. 21ರಂದು ನಗರದ ಕದ್ರಿ ಬಳಿ ಸಂತ್ರಸ್ಥೆಯ ಕಾರು ಕೆಟ್ಟು ಹೋದ ಸಂದರ್ಭ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲಿನಲ್ಲಿರುವ ಅಪಾರ್ಟ್ಮೆಂಟ್ ಗೆ ಬಿಟ್ಟು ಬಂದಿದ್ದ. ಈ ವೇಳೆ ಆತ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಆ. 8ರಂದು ಯುವತಿಯ ಮನೆ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಸಹಾಯಕ್ಕಾಗಿ ಶಫಿನ್‌ಗೆ ಕರೆ ಮಾಡಿದ್ದಾಳೆ. ಆತ ತನ್ನ ಪರಿಚಿತ ರಿಪೇರಿಯವನನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿ ಬಳಿಕ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಜ್ಯೂಸ್ ಕುಡಿದ ಯುವತಿ ನಿದ್ದೆಗೆ ಜಾರಿದ್ದು, ಎಚ್ಚರಗೊಂಡಾಗ ಅತ್ಯಾಚಾರ ನಡೆದಿರುವ ವಿಚಾರ ತಿಳಿದಿದೆ.

Minor boys rape and murder eight-year-old girl in Andhra village - The  Statesman

ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಈಗಾಗಲೇ ಮಾಡಿರುವ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿ ಯುವತಿಯ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ.

ನಂತರ ಯುವತಿಯ ಮನೆಯವರು ಕಾರನ್ನು ಕೇಳಿದ್ದಾರೆ. ಆತನಿಂದ ಕಾರನ್ನು ಪಡೆದುಕೊಳ್ಳಬೇಕು ಎಂದು ಯುವತಿ ಅ.25ರಂದು ಆತನ ವಿಳಾಸವನ್ನು ಹುಡುಕಿ ಉಳ್ಳಾಲ ದೇರಳಕಟ್ಟೆಯ ಆತ ವಾಸವಿದ್ದ ಅಪಾರ್ಟ್ಮೆಂಟ್‌ಗೆ ಹೋದಾಗ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕಂಡುಬAದಿದೆ. ವಾಚ್‌ಮನ್ ಬಳಿ ಮನೆಯ ವಿಳಾಸ ಪಡೆದು ಹೋಗಿ ಆತನ ತಾಯಿಯಲ್ಲಿ ಕಾರು ವಾಪಸು ನೀಡುವಂತೆ ವಿನಂತಿಸಿದಾಗ ಅಲ್ಲಿದ್ದ ಶಫಿನ್‌ನ ಅಣ್ಣ ಮೊಹಮ್ಮದ್ ಶಿಯಾಬ್ ಕೂಡ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅ. 27ರಂದು ರಾತ್ರಿ 9 ಗಂಟೆ ವೇಳೆ ಮೊಹಮ್ಮದ್ ಶಫೀನ್ ಅಕ್ರಮವಾಗಿ ಯುವತಿಯ ಮನೆಗೆ ಪ್ರವೇಶಿಸಿ, ಆಕೆಯ ಬ್ಯಾಗ್‌ನಲ್ಲಿದ್ದ 62 ಸಾವಿರ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

Leave a Comment