Mangalore and Udupi news
ಅಪರಾಧದೇಶ- ವಿದೇಶಪ್ರಸ್ತುತಮಂಗಳೂರುರಾಜಕೀಯರಾಜ್ಯ

ಮಿನಿ ವಿಧಾನಸೌಧವೂ ‘ವಕ್ಫ್’ ಆಸ್ತಿ.!!

ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ವಿವಾದ ಬಳಿಕ ಮಠ, ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಸದ್ಯ ದೇವಸ್ಥಾನ, ಮಠ ಬಳಿಕ ಬಾಗಲಕೋಟೆಯ ಸರ್ಕಾರಿ ಕಚೇರಿಯ ಜಾಗದ ಪಹಣಿಯಲ್ಲೂ ವಕ್ಫ್ ಎಂದು ಉಲ್ಲೇಖವಾಗಿದೆ.

ಬಾಗಲಕೋಟೆಯಲ್ಲಿ ಸರಕಾರಿ ಕಚೇರಿ ಜಾಗದ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಬಾದಾಮಿ ಪಟ್ಟಣದ ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ಕಚೇರಿ ಹಾಗೂ ನಿರ್ಮಾಣ ಹಂತದ ಮಿನಿ ವಿಧಾನಸೌಧ ಕಟ್ಟಡದ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಕಬ್ಜೆದಾರರು, ಸ್ವಾಧೀನದಾರರ ಕಾಲಂ ನಂ 9ರಲ್ಲಿ ವಕ್ಪ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ.

ಸರ್ವೆ ನಂ 192 ರಲ್ಲಿನ ಮಿನಿ ವಿಧಾನಸೌಧ, ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ವಿಭಾಗದ ಕಚೇರಿಯ ಜಾಗದ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಕೂಡ ಆರಂಭವಾಗಿದ್ದು, ‘ಪ್ರತಿಯೊಬ್ಬ ರೈತರು ಹಾಗೂ ಕಮರ್ಷಿಯಲ್ ನಿವೇಶನ ಉಳ್ಳವರು ಪಹಣಿ ಚೆಕ್ ಮಾಡಿಕೊಳ್ಳಿ, ಯಾವ ಜಾಗದಲ್ಲಿ ವಕ್ಪ್ ಬೋರ್ಡ್ ಹೆಸರು ದಾಖಲಾಗಿರುತ್ತದೆಯೋ ದೇವರೆ ಬಲ್ಲ’ ಎಂದು ಕ್ಯಾಂಪೇನ್ ಆರಂಭವಾಗಿದೆ.

The Waqf Bill 2024: An Open Letter to the Joint Committee of Parliament,  the Opposition, and India's Muslim Communities | SabrangIndia

Related posts

Leave a Comment