Mangalore and Udupi news
Blogಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಎಲ್ಲಾ ಹವಾಮಾನಕ್ಕೂ ಒಗ್ಗಿಕೊಳ್ಳುವ, ಅಲ್ಪ ಆರೈಕೆಯಲ್ಲಿಯೇ ಬೆಳೆಯುವ ಬಹೂಪಯೋಗಿ ಹಣ್ಣು

ಪೈನಾಪಲ್ ಅಥವಾ ಅನನಾಸ್ ಹಣ್ಣನ್ನು ಪ್ರತಿಯೊಬ್ಬರೂ ಸಹ ಇಷ್ಟ ಪಡುತ್ತಾರೆ. ಭಾರತದ ಎಲ್ಲಾ ಹವಾಮಾನಕ್ಕೂ ಒಗ್ಗಿಕೊಳ್ಳುವ ಅನನಾಸ್ ಸಸ್ಯ ಎಲ್ಲರಿಗೂ ಚಿರಪರಿಚಿತ. ಅಂತೆಯೇ ಎಲ್ಲಾ ಕಡೆಯಲ್ಲಿ ಬೆಳೆಯುವ ಈ ಸಸ್ಯದ ಹಣ್ಣು ನಿಜಕ್ಕೂ ಬಹೂಪಯೋಗಿ. ಬೇರೆ ಬೇರೆ ರೀತಿಯ ಅನಾನಾಸು ತಳಿಗಳು ಲಭ್ಯವಿದ್ದು ಹಿತ್ತಲಲ್ಲಿ ಈ ಸಸ್ಯವನ್ನೂ ಅಲ್ಪ ಆರೈಕೆಯಲ್ಲಿಯೇ ಬೆಳೆಸಬಹುದು.

Pineapple: calories and nutritional composition | Aprifelಸಿಹಿ- ಒಗರು ರುಚಿ ಉಳ್ಳ ಈ ಹಣ್ಣು ಆಬಾಲವೃದ್ಧರಿಗೂ ಬಲು ಇಷ್ಟ. ದಿನನಿತ್ಯದ ಜೀವನದಲ್ಲಿ ಉಪಯೋಗಕ್ಕೆ ಬರುವ ಈ ಹಣ್ಣನ್ನು ಸಾಮಾನ್ಯವಾಗಿ ಜ್ಯೂಸ್, ಪದಾರ್ಥ, ಸಲಾಡ್, ಐಸ್‌ಕ್ರೀಂ, ಹೀಗೆ ನಾನ ರೀತಿಯಾಗಿ ಆಹಾರವಾಗಿ ಸೇವಿಸುವುದುಂಟು. ಈ ಹಣ್ಣನ್ನು ಸೇವಿಸೋದರಿಂದ ಆರೋಗ್ಯಲಾಭಗಳ ಕುರಿತು ಮಾಹಿತಿ ಒಂದಿಷ್ಟು..
ಅನನಾಸ್ ತಿನ್ನುವುದರಿಂದ ಪಚನ ಕ್ರಿಯೆಗೆ ನೆರವಾಗುತ್ತದೆ ಮತ್ತು ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಹಣ್ಣಲ್ಲಿರುವ ಸಮೃದ್ಧವಾಗಿರುವ ಬ್ರೋಮಲೈನ್ ಎಂಬ ಜೀರ್ಣ ಕಿಣ್ವವು ಜೀರ್ಣಿಸಲು ಕಠಿಣವಾಗಿರುವ ಪ್ರೋಟಿನ್‌ನ್ನು ವಿಭಜಿಸುತ್ತದೆ. ಅದು ಜೀರ್ಣಾಂಗವನ್ನು ಆರೋಗ್ಯಯುತವಾಗಿರಿಸಲು ನೆರವಾಗುತ್ತದೆ. ಅನನಾಸ್ ಹೊಟ್ಟೆನೋವು, ಎದೆಯುರಿ, ಅತಿಸಾರ, ಹೊಟ್ಟೆಯುಬ್ಬರ, ಮಲಬದ್ಧತೆ ಮತ್ತು ವಾಕರಿಕೆಯಂತಹ ಸಮಸ್ಯೆಗಳಿಂದ ಮುಕ್ತಿಯನ್ನೂ ನೀಡುತ್ತದೆ.

26,900+ Pineapple Slice Close Up Stock Photos, Pictures & Royalty-Free  Images - iStock
ಅನನಾಸ್‌ನಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ನಮ್ಮ ಶರೀರಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ. ವಿವಿಧ ವೈರಸ್‌ಗಳಿಂದ ಶರೀರಕ್ಕೆ ರಕ್ಷಣೆಯನ್ನು ನೀಡುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಸೋಂಕುಗಳ ವಿರುದ್ಧ ಹೋರಾಡಲು ಶರೀರವನ್ನು ಸದೃಢಗೊಳಿಸುತ್ತದೆ. ಅಂತೆಯೇ ಹೃದಯ ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ವಿವಿಧ ಕ್ಯಾನ್ಸರ್‌ಗಳು ಬರುವುದನ್ನು ತಡೆಗಟ್ಟುತ್ತದೆ.

Improve Sleep with This Tasty Pineapple Juice Recipe – Little West
ದೇಹತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಅನನಾಸ್ ನೆರವಾಗುತ್ತದೆ. ಅದು ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು, ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರು ಹಸಿವೆಯನ್ನು ತಡೆದು ತುಂಬ ಸಮಯದವರೆಗೆ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಅದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ಕಾಯ್ದುಕೊಳ್ಳಲು ನೆರವಾಗುತ್ತದೆ.
ಅನನಾಸ್ ಕಣ್ಣಿನ ಆರೋಗ್ಯಕ್ಕೂ ಲಾಭದಾಯಕವಾಗಿದೆ. ದೃಷ್ಟಿ ಸಂಬ0ಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅನನಾಸ್ ಸೇವನೆಯಿಂದ ಕಣ್ಣಿನ ಪೊರೆಯ ಅಪಾಯವು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳಲ್ಲಿಯ ಸ್ನಾಯುಗಳ ಸವಕಳಿಯನ್ನು ತಡೆಹಿಡಿಯುವುದರಲ್ಲಿ ಸಹಾಯಕಾರಿಯಾಗುತ್ತದೆ.

ಅನನಾಸ್‌ನಲ್ಲಿರುವ ಮ್ಯಾಂಗನೀಸ್ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸಂಯೋಜಕ ಅಂಗಾ0ಶಗಳ ಆರೋಗ್ಯವನ್ನೂ ಕಾಯ್ದುಕೊಳ್ಳುತ್ತದೆ. ಅನನಾಸ್ ಮೂಳೆಗಳ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಅಸ್ಥಿರಂಧ್ರತೆಯ ಅಪಾಯವನ್ನು ತಗ್ಗಿಸುತ್ತದೆ. ಕ್ಯಾಲ್ಸಿಯಂ ಜೊತೆಗೆ ಅನನಾಸ್‌ನ ಸೂಕ್ತ ಸೇವನೆಯು ಜೀವಿತವಿಡೀ ಮೂಳೆಗಳು ಆರೋಗ್ಯಯುತವಾಗಿರುವಂತೆ ಮಾಡುತ್ತದೆ.

Pineapple, the food that eats you back | by Kevin L. Knights | Food-101 |  Medium

ನೀವು ಹೆಚ್ಚು ನಾರು ಸೇವಿಸುತ್ತಿಲ್ಲವಾದರೆ ಏಕಾಏಕಿ ಅನನಾಸ್ ಸೇವನೆಯನ್ನು ಹೆಚ್ಚಿಸಬೇಡಿ. ಅದನ್ನು ಕ್ರಮೇಣ ನಿಮ್ಮ ಆಹಾರದಲ್ಲಿ ಹೆಚ್ಚಿಸಿಕೊಳ್ಳಿ. ನೀವು ಅನನಾಸ್ ರಸವನ್ನು ಸೇವಿಸುವುದಿದ್ದರೆ ಅದಕ್ಕೆ ಸಕ್ಕರೆಯನ್ನು ಸೇರಿಸಬೇಡಿ. ಇಷ್ಟೆಲ್ಲಾ ಉಪಯೋಗವಿರುವ ಅನನಾಸ್ ಹಣ್ಣನ್ನು ಮಿತವಾಗಿ ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Related posts

Leave a Comment