ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪರಿಶಿಷ್ಟ ಜಾತಿ ಯುವಜನರಿಗೆ ವಿಡಿಯೋಗ್ರಫಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ನ.15ರಿಂದ 26ರವರೆಗೆ ಶಿಬಿರ ನಡೆಯಲಿದೆ. ವಿದ್ಯಾರ್ಹತೆ- ದ್ವಿತೀಯ ಪಿಯುಸಿ(ಪಾಸ್/ ಫೇಲ್) ಮಹಿಳೆಯರಿಗೆ ಮಾತ್ರ. 18ರಿಂದ 40 ವರ್ಷದವರು ಭಾಗವಹಿಸಬಹುದು. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ. ಊಟೋಪಹಾರ, ಪ್ರಮಾಣಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವತಿಯರಿಗೆ ವಸತಿ ವ್ಯವಸ್ಥೆ ನೀಡಲಾಗುತ್ತದೆ.
ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು (ದೂರವಾಣಿ: 0824-2451264) ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ನ.3ರೊಳಗೆ ಮಂಗಳಾ ಕ್ರೀಡಾಂಗಣ ಕಚೇರಿಗೆ ತಲುಪಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.