Mangalore and Udupi news
ದೇಶ- ವಿದೇಶಪ್ರಸ್ತುತರಾಜ್ಯ

ವಿಶೇಷ ಅಕ್ಷರ-ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸ್ವೀಕಾರ ಆಗುವುದಿಲ್ಲ.!!

Advertisement

ನಾಳೆಯಿಂದ ಯುಪಿಐ ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕಾರ ಆಗುವುದಿಲ್ಲ.

ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ ಐಡಿಯಲ್ಲಿ ವಿಶೇಷ ಅಕ್ಷರ, ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು ಸುತ್ತೋಲೆ ಪ್ರಕಟಿಸಿದೆ.

Big Change In UPI Rules, Remove These Characters From Your ID Before  February 1 - News18

ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು. ಯುಪಿಐ ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು. ಒಂದು ವೇಳೆ ಈ ರೀತಿ ಚಿಹ್ನೆ ಇರುವ ಯುಪಿಐ ಐಡಿ ಬಳಸಿದ್ದರೆ ಪೇಮೆಂಟ್ ಸ್ವೀಕಾರ ಆಗುವುದಿಲ್ಲ ಎಂದು ತಿಳಿಸಿದೆ. ಫೆಬ್ರವರಿ 1 ರಿಂದ UPI ಐಡಿಗಳು ಸಂಖ್ಯೆಗಳು (0-9) ಮತ್ತು ವರ್ಣಮಾಲೆಯ (A-Z) ಸೇರಿಸಲು ಮಾತ್ರ ಅನುಮತಿಸಲಾಗುತ್ತದೆ.

Related posts

Leave a Comment