
ಮಂಗಳೂರು : ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ವಿಗ್ಗಿ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಡಿ.31 ಮಧ್ಯರಾತ್ರಿ ಉಳ್ಳಾಲ ರಾ.ಹೆ. 66ರ ಉಚ್ಚಿಲ- ಸಂಕೋಳಿಗೆಯಲ್ಲಿ ನಡೆದಿದೆ.
ನಾಟೆಕಲ್ ಪನೀರ್ ನಿವಾಸಿ ಉಮ್ಮರ್ ಫಾರೂಕ್ ಯಾನೆ ಅಝರ್(33) ಅಪಘಾತದಲ್ಲಿ ಮೃತಪಟ್ಟ ಯುವಕ.
ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಝರ್, ಮಂಗಳವಾರ ರಾತ್ರಿ ತಲಪಾಡಿ ಯಿಂದ ಬರುತ್ತಿದ್ದ ವೇಳೆ ಸಂಕೊಳಿಗೆ ಹಾಲ್ ಬಳಿ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಈ ವೇಳೆ ಸವಾರ ಅಝರ್ ರಸ್ತೆಗೆಸೆಯಲ್ಪಟ್ಟು ಲಾರಿ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.