ಶಿರಸಿ: ವಾಟೆಹೊಳೆ ಫಾಲ್ಸ್ ವೀಕ್ಷಣೆಗೆ ಹೋದಾಗ ದೊಡ್ಡ ಅನಾಹುತ ನಡೆದಿದ್ದು, ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಕ್ಷಯ್ ಭಟ್ (21), ಸುಹಾಸ್ ಶೆಟ್ಟಿ (21) ಮೃತಪಟ್ಟ ಯುವಕರು.
ಮೃತಪಟ್ಟ ಅಕ್ಷಯ್ ಹಾಗೂ ಸುಹಾಸ್ ಮೂಲತಃ ಶಿರಸಿಯವರು. ನಿನ್ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತ ವೀಕ್ಷಣೆಗೆ ಎಂದು 6 ಜನ ಸ್ನೇಹಿತರ ಜೊತೆ ಬಂದಿದ್ದರು. ಫಾಲ್ಸ್ ವೀಕ್ಷಣೆಯ ಭರದಲ್ಲಿ ಕಾಲು ಜಾರಿ ಇಬ್ಬರು ಬಿದ್ದಿದ್ದಾರೆ.
ಕಾಲು ಜಾರಿ ಬಿದ್ದು, ಕಣ್ಮರೆಯಾಗಿದ್ದಾರೆ.. ಪ್ರಪಾತ ದೊಡ್ಡದಿರೋದ್ರಿಂದ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. 6 ಜನ ಸ್ನೇಹಿತರು ಬಿಕಾಂ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್ (22) ಹಾಗು ಮರಾಠಿಕೊಪ್ಪದ ಜೋಡಕಟ್ಟೆ ನಿವಾಸಿಯಾಗಿದ್ದ ಸುಹಾಸ ಶೆಟ್ಟಿ (22) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘನೆ ನಡೆದಿದೆ.
