ಛತ್ತಿಸ್ ಗಢದ ಬಸ್ತರ್ ಅಭುಜ್ ಮರ್ ಕಾಡಿನಲ್ಲಿ ನಡೆದ ಎನ್‌ಕೌಂಟರಿನಲ್ಲಿ 36 ಜನ ನಕ್ಸಲರು ಹತರಾಗಿದ್ದಾರೆ. 10 ಕಿಲೋಮೀಟರ್ ವ್ಯಾಪ್ತಿಯ ಕಾಡಲ್ಲಿ ಶುಕ್ರವಾರ ನಡೆದ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ 36 ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ.
ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ, ನಾರಾಯಣಪುರ-ದಂತೇವಾಡ ಅಂತರ ಜಿಲ್ಲಾ ಗಡಿಯಲ್ಲಿರುವ ಅಭುಜ್‌ಮಾದ್‌ನ ತುಳುತುಲಿ ಮತ್ತು ನೆಂದೂರ್ ಗ್ರಾಮಗಳ ನಡುವಿನ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತರ್ ಪ್ರದೇಶದ ಪೊಲೀಸ್ ಮಹಾನಿರೀಕ್ಷಕರಾಗಿರುವ ಸುಂದರರಾಜ್ ಪಿ ರವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಛತ್ತೀಸ್‌ಗಢ ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ಸೈಟ್‌ನಿಂದ AK-47 ಮತ್ತು ಸ್ವಯಂ-ಲೋಡಿಂಗ್ ರೈಫಲ್ (SLR) ಸೇರಿದಂತೆ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಈ ವರ್ಷ ದಾಂತೇವಾಡ ಮತ್ತು ನಾರಾಯಣಪುರದಂತಹ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಾದ್ಯಂತ, ಭದ್ರತಾ ಪಡೆಗಳು ಹಾಗೂ ಪೊಲೀಸರೊಂದಿಗಿನ ವಿವಿಧ ಗುಂಡಿನ ಕಾಳಗಗಳಲ್ಲಿ, ಭದ್ರತಾ ಪಡೆಗಳು ಕನಿಷ್ಠ 185 ನಕ್ಸಲ್ಗಳನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಏಪ್ರಿಲ್ 16 ರಂದು ಸಹ, ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಸಂಘಟನೆಯ ಹಿರಿಯ ನಕ್ಸಲ್ಗಳು ಸೇರಿದಂತೆ 29 ನಕ್ಸಲೀಯರು ಎನ್‌ಕೌಂಟರ್ ಮಾಡಿದ್ದರು. ಭದ್ರತಾ ಪಡೆಗಳು ಸುಕ್ಮಾ ಜಿಲ್ಲೆಯ ಬಸ್ತಾರ್ ಪ್ರದೇಶದ ನಕ್ಸಲೈಟ್ ಶಿಬಿರವನ್ನು ಕೆಡವುವುದರೊಂದಿಗೆ, ಕಾರ್ಯಾಚರಣೆಯ ಸಮಯದಲ್ಲಿ ಹಲವಾರು ಸ್ಫೋಟಕಗಳು ಮತ್ತು ಇತರ ವಸ್ತುಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು.
36 Naxals killed in encounter;
At least 36 Naxals were killed in an ongoing encounter with security forces in Chhattisgarh’s Bastar region on Friday, October 4. The encounter broke out in the Abhujmaad forest area along the border of the Narayanpur and Dantewada districts.