Mangalore and Udupi news
ದೇಶ- ವಿದೇಶಪ್ರಸ್ತುತರಾಜಕೀಯ

ಅಮೆರಿಕಾದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥೆಯಾಗಿ ತುಳಸಿ ನೇಮಕಗೊಳಸಿದ ಟ್ರಂಪ್

ಅಮೆರಿಕದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥ ಸ್ಥಾನಕ್ಕೆ ತುಳಸಿ ಗಬಾರ್ಡ್ ಅವರನ್ನು ನಿಯೋಜಿತ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್ ನೇಮಕ ಮಾಡಿದ್ದಾರೆ. ಟ್ರಂಪ್ 2ನೇ ಅವ­ಧಿಯ ಅಧ್ಯಕ್ಷೀಯ ಅವಧಿಯಲ್ಲಿ ಸರಕಾರದ ಪ್ರಮುಖ ಹುದ್ದೆಗೆ ಹಿಂದೂ ಸಮುದಾಯಕ್ಕೆ ಸೇರಿದ ಮೊದಲ ಮಹಿಳೆಗೆ ಅಗ್ರಸ್ಥಾನ ಸಿಕ್ಕಿದಂತಾಗಿದೆ.

Who is Tulsi Gabbard, first US Hindu lawmaker named as Trump's spy chief? -  India Today

ತುಳಸಿ ಎನ್ನುವ ಹೆಸರು ಅಮೆರಿಕದಲ್ಲಿ ಹುಟ್ಟಿದವರಿಗೆ ಇರಲು ಸಾಧ್ಯವೇ ಇಲ್ಲ ಬಿಡಿ. ಇದು ಅಪ್ಪಟ ಹಿಂದೂ ಹೆಸರು. ಆದರೆ, ಕುತೂಹಲದ ವಿಷಯ ಏನಪ್ಪಾ ಎಂದರೆ ಈ ತುಳಸಿ ಭಾರತೀಯಳಲ್ಲ. ಹಾಗೆಂದು ಭಾರತದ ಸಂಬ0ಧವೂ ಇಲ್ಲ ಆದರೂ ಹೆಸರು ತುಳಸಿ. ಏಕೆಂದರೆ ಈಕೆ ಹಿಂದೂ ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್ ಪಕ್ಷ ಸೇರಿದ ಇವರು ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

Tulsi Gabbard, Hindu Congress Woman On Modi's Speech At U.S. Congress -  YouTube

ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿದ್ದ ಇತ್ತೀಚೆಗಷ್ಟೇ ನಿಯೋಜಿತ ಅಧ್ಯಕ್ಷರಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಅವರ ನೇರ ನಿಯಂತ್ರಣದಲ್ಲಿ ಅಮೆರಿಕದ 18 ಗುಪ್ತಚರ ಸಂಸ್ಥೆಗಳು ಕಾರ್ಯವೆ­ಸಗಲಿವೆ. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

Tulsi Gabbard Is Refocusing Her Military Career In California - Honolulu  Civil Beat

ಯಾರಿದು ತುಳಸಿ.? ಇವರ ಹಿನ್ನಲೆಯೇನು.?
1981 ಎ.12ರಂದು ಅಮೆರಿಕದಲ್ಲಿ ಜನಿಸಿದ ತುಳಸಿ ಗಬಾರ್ಡ್ ತಾಯಿ ಕಾರೊಲ್ ಪೋರ್ಟರ್ ಹಿಂದೂ ಧರ್ಮಕ್ಕೆ ಮತಾಂತರಗೊ0ಡಿದ್ದರು. ತುಳಸಿ ಅವರ ತಾಯಿ ಹಿಂದೂವಲ್ಲ ಆದರೆ ಹಿಂದೂ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿಕೊಂಡವರು. ಹಿಂದೂ ಆಚರಣೆಗಳಿಗೆ ಮನಸೋತ ತಾಯಿ, ಅಮೆರಿಕದಲ್ಲಿಯೇ ಹಿಂದೂವಾಗಿ ಮತಾಂತರಗೊ0ಡುಬಿಟ್ಟರು.

ISKCON News | Vaishnava Hindu Congresswoman Tulsi Gabbard To Run For  President in 2020 | ISKCON News

ಅಷ್ಟೇ ಅಲ್ಲದೇ, ತಮ್ಮೆಲ್ಲಾ ಮಕ್ಕಳಿಗೂ ಹಿಂದೂ ಹೆಸರನ್ನೇ ಇಟ್ಟರು. ಮನೆಯಲ್ಲಿ ಹಿಂದೂ ಧರ್ಮವನ್ನೇ ಪಾಲಿಸತೊಡಗಿದರು. ಇದು ಮಕ್ಕಳ ಮೇಲೂ ಗಾಢ ಪರಿಣಾಮ ಬೀರಿತು. ಭಾರತದ ಬೇರು ಅಲ್ಲದಿದ್ದರೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ತುಳಸಿ ಗಬ್ಬಾರ್ಡ್ ಅವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಮೊದಲ ಹಿಂದೂ ಯುಎಸ್ ಕಾಂಗ್ರೆಸ್ ಮಹಿಳೆಯಾಗಿದ್ದರು. ಅವಳು ಅಮೇರಿಕನ್ ಸಮೋವಾ ಮೂಲದವರಾಗಿದ್ದರೂ, ತುಳಸಿ ಭಗವದ್ಗೀತೆಯ ಮೇಲೆ ತನ್ನ ಕೈಯಿಂದ ಅಧಿಕಾರಕ್ಕೆ ಪ್ರಮಾಣವಚನ ಸ್ವೀಕರಿಸಿದರು.

ಇವರು ನಾಲ್ಕು ಬಾರಿ ಸಂಸದರಾಗಿದ್ದಾರೆ. 2020ರಲ್ಲಿ ಅಧ್ಯಕ್ಷೀಯ ಆಕಾಂಕ್ಷಿಯೂ ಆಗಿದ್ದರು. ಅವರು ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷವನ್ನು ತೊರೆದು ರಿಪಬ್ಲಿಕನ್ ಪಕ್ಷಕ್ಕೆ ಸೇರಿದರು. ಇವರು ಭಾರತೀಯರಲ್ಲದಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸುತ್ತಲೇ ಬಂದಿದ್ದಾರೆ.

Tulsi Gabbard Presidential Race | Tulsi Gabbard American politician US  Presidential Candidate Latest News and Updates On Hinduphobia tweet |  प्राइमरी चुनाव में निराशाजनक प्रदर्शन के बाद तुलसी गबार्ड ने ...

ಇನ್ನು ಇವರು ನೇಮಕಗೊಂಡಿರುವ ಗುಪ್ತಚರ ಇಲಾಖೆ ಕುರಿತು ಹೇಳುವುದಾದರೆ, ನ್ಯೂಯಾರ್ಕ್ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11 ರಂದು ದಾಳಿ ನಡೆದಿತ್ತು. ಆ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ. ಇದಕ್ಕೆ ಈಗ ಮೊದಲ ಹಿಂದೂ ಮಹಿಳೆ ನಿರ್ದೇಶಕಿಯಾಗಿದ್ದಾರೆ.

Tulsi Gabbard, who ran for 2020 Democratic nomination, endorses Trump  against former foe Harris | Arab News

Related posts

Leave a Comment