Mangalore and Udupi news
ಅಪರಾಧದಕ್ಷಿಣ ಕನ್ನಡಪ್ರಸ್ತುತ

ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ – ಕಾಸರಗೋಡಿನ ಮೂರು ಕಳ್ಳರು ಅರೆಸ್ಟ್

ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಖ್ಯಾತ ಮೂವರು ಕಳ್ಳರ ತಂಡವನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಸರಗೋಡಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು, ಕೋತಂಕರ ನಿವಾಸಿ ಬಶೀರ್ ಕೆ ಪಿ. ಯಾನೆ ಆಕ್ರಿ ಬಶೀರ್ (44), ಕೇರಳದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್ ನ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಜ್(46) ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ನಿವಾಸಿ ಎಫ್.ಜೆ.ಮಹಮ್ಮದ್ ಇಸ್ಮಾಯಿಲ್ ಬಂಧಿತರು. 

ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇರಾದಲ್ಲಿ ಈ ಮೂವರು ಖದೀಮರನ್ನು ಬಂಧಿಸಿದೆ. ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರ ಪೈಕಿ ಬಶೀರ್ ಕೆ.ಪಿ. ಎಂಬಾತ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್ ಎಂಬಾತನ ವಿರುದ್ಧ 3 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿಗಳು ನ. 4ರಂದು ದೇವಸ್ಥಾನದ ಮುಂಬಾಗಿಲ ಮೂಲಕ ಒಳ ನುಗ್ಗಿ ಕಳ್ಳತನ ನಡೆಸಿ ಸಿಸಿ ಕ್ಯಾಮರಾದ ಡಿವಿಆರ್‌ನ್ನು ಕೂಡ ಹೊತ್ತೂಯ್ದಿದ್ದರು. ಅದಕ್ಕೆ ಮುನ್ನಾದಿನ ಫರಂಗಿಪೇಟೆ ಸುಜೀರಿನ ಶ್ರೀ ರವಳನಾಥ ಮಂದಿರದಲ್ಲೂ ಕಳ್ಳತನ ನಡೆದಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು.

Related posts

Leave a Comment