Mangalore and Udupi news
ಕಾಸರಗೋಡುದೇಶ- ವಿದೇಶ

ತಲೆನೋವೆಂದು ಮಲಗಿದ್ದ ವಿದ್ಯಾರ್ಥಿನಿ ತರಗತಿಯಲ್ಲೇ ಮೃತ್ಯು

Advertisement

ತಲೆನೋವೆಂದು ಮಲಗಿದ್ದ ವಿದ್ಯಾರ್ಥಿನಿ ತರಗತಿಯಲ್ಲೇ ಅಸುನೀಗಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ತ್ರಿಶೂರ್‌ನ ವಿಯ್ಯೂರಿನ ರಾಮವರ್ಮಪುರಂ ಕೇಂದ್ರೀಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿ ಕುಂದುಕಾಡ್‌ನ ಕೃಷ್ಣಪ್ರಿಯಾ ಮೃತಪಟ್ಟ ಬಾಲಕಿ.

ಕೃಷ್ಣಪ್ರಿಯಾ ಎಂದಿನ0ತೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಧ್ಯಾಹ್ನ 2 ಗಂಟೆಯವರೆಗೆ ತರಗತಿಯಲ್ಲಿ ಆರೋಗ್ಯವಾಗಿದ್ದಳು. ಆ ನಂತರ ತಲೆನೋವೆಂದು ಬೆಂಚಿನ ಮೇಲೆ ತಲೆಯಿಟ್ಟಯ ನಿದ್ರಿಸಿದ್ದಾಳೆ. ಮಧ್ಯಾಹ್ನ 2.30 ರ ಸುಮಾರಿಗೆ ಪ್ರಜ್ಞೆ ತಪ್ಪಿದ್ದಾಳೆ. ಸಹಪಾಠಿಗಳು ಆಕೆಯನ್ನು ಎಚ್ಚರಗೊಳಿಸಿದರೂ, ಎಚ್ಚರಗೊಂಡಿಲ್ಲ.

ಇದರಿಂದ ಗಾಬರಿಗೊಂಡ ಸಹಪಾಠಿಗಳು, ಕೂಡಲೇ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೃಷ್ಣಪ್ರಿಯಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಮಗುವಿನ ಹಠಾತ್ ಸಾವಿನ ಬಗ್ಗೆ ವಿಯ್ಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಸಂಬAಧಿಕರು ತಿಳಿಸಿದ್ದಾರೆ.

Related posts

Leave a Comment