Mangalore and Udupi news
ದಕ್ಷಿಣ ಕನ್ನಡಪ್ರಸ್ತುತಮಂಗಳೂರುರಾಜ್ಯ

ದ.ಕ ಜಿಲ್ಲೆಯ ಹಲವೆಡೆ ಚಿಕನ್ ಪಾಕ್ಸ್ ಆತಂಕ; ಒಂದೇ ತಾಲೂಕಿನಲ್ಲಿ 21 ಪ್ರಕರಣ.!

Advertisement

ಕಡಬ : ಕರಾವಳಿಯಲ್ಲಿ ತಾಪಮಾನ ಏರೆಕೆಯಾಗುತ್ತಿರುವುದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಚಿಕನ್ ಪಾಕ್ಸ್ (ಸಿಡುಬು) ಆತಂಕ ಎದುರಾಗಿದ್ದು, ಕಡಬ ತಾಲ್ಲೂಕು ಒಂದರಲ್ಲೇ ವಿವಿಧ ಶಾಲೆಗಳ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್ ಆವರಿಸಿರುವ ಬಗ್ಗೆ ವರದಿಯಾಗಿದೆ.

ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿಯನ್ವಯ ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು ಒಂಭತ್ತು ಮಕ್ಕಳಿಗೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರು ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು ಮಗುವಿಗೆ, ಲಾವತ್ತಡ್ಕದಲ್ಲಿ ಒಂದು ಮಗುವಿಗೆ, ಗೊಳಿತ್ತೊಟ್ಟುವಿನಲ್ಲಿ ಒಂದು ಮಗುವಿಗೆ ಸೇರಿದಂತೆ ಒಟ್ಟು 21 ಮಕ್ಕಳಿಗೆ ಚಿಕನ್ ಪಾಕ್ಸ್ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

chicken pox spreading - Mangalore

ರೋಗ ಹರಡಿರುವ ಶಾಲೆಗಳ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಶಾಲೆಗೆ ಕಳುಹಿಸದಂತೆ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.‌

Related posts

Leave a Comment