Mangalore and Udupi news
ಅಪರಾಧಉಡುಪಿದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: ಮನೆಯಿಂದ ಚಿನ್ನ, ವಜ್ರಾಭರಣ ಎಗರಿಸಿದ ಹೋಮ್ ನರ್ಸ್ ಅರೆಸ್ಟ್.!!

ಉಡುಪಿ: ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ 31 ಲಕ್ಷ ರೂ.ಗೂ ಅಧಿಕ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದು, ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬoಧಿತನನ್ನು ಸಿದ್ದಪ್ಪ ಕೆ. ಕೊಡ್ಲಿ ಎಂದು ಗುರುತಿಸಲಾಗಿದೆ.

ಉಡುಪಿ| ಚಿನ್ನ, ವಜ್ರಾಭರಣ ಕಳ್ಳತನ ಪ್ರಕರಣ: ಹೋಮ್ ನರ್ಸ್ ಬಂಧನ

ನ.17ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಸಾದ ಎಸ್. ಎಸ್ ಎಂಬವರು ದೂರು ದಾಖಲಿಸಿದ್ದು, ಅವರ ಮನೆ ಯಲ್ಲಿ ಹೋಂ ನರ್ಸ ಆಗಿ ಕೆಲಸ ಮಾಡಿಕೊಂಡಿದ್ದ, ಸಿದ್ದಪ್ಪ ಕೆ. ಕೊಡ್ಲಿ ಎಂಬಾತನು ಮನೆಯ ಹಾಲ್ ನ ಗಾಜಿನ ಬೀರುವಿನಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇರಿಸಿದ್ದ ಗ್ರಾಡ್ರೇಜ್ ನ ಲಾಕರ್ ನಲ್ಲಿ ಇರಿಸಿದ್ದ ಸುಮಾರು 427 ಗ್ರಾಂ ತೂಕದ 31,17,100ರೂ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪಿ.ಐ, ರಾಮಚಂದ್ರ ನಾಯಕ್ ಮತ್ತವರ ತಂಡ ನ. 19 ರಂದು ಆರೋಪಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಿದ್ದಪ್ಪ ಕೆ. ಕೊಡ್ಲಿ(23)ನನ್ನು ದಸ್ತಗಿರಿ ಮಾಡಿ, ಕಳವು ಮಾಡಿ ಅಡಗಿಸಿಟ್ಟಿದ್ದ ಸ್ಥಳದಿಂದ ಅಂದಾಜು ರೂ: 30,00,000 ಮೌಲ್ಯದ 374.45 ಗ್ರಾಮ್ಸ್ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್‌ಐ ಈರಣ್ಣ ಶಿರಗುಂಪಿ, ಪುನೀತ್, ಉಡುಪಿ ಸೆನ್ ಪೊಲೀಸ್ ಠಾಣೆ ಪಿ. ಎಸ್. ಐ ಪವನ್ ಕುಮಾರ್, ಉಡುಪಿ ನಗರ ಠಾಣೆಯ ಅಬ್ದುಲ್ ಬಶೀರ್, ಸಂತೋಷ, ಚೇತನ್ ಮತ್ತು ಸೆನ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ್ ಭಾಗವಹಿಸಿದ್ದರು

Related posts

Leave a Comment