Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

(ಡಿ.08)ಭವ್ಯ ಮೆರವಣಿಗೆ ಮೂಲಕ ತಾರಬರಿ ಸನ್ನಿಧಾನಕ್ಕೆ ಬರಲಿದೆ ನೂತನ ಪವಿತ್ರ “ಕೊಡಿ ಮರ”

“ಸುಂಠಿಬೊಟ್ಟು ಜನನ, ತಾರಬರಿತ ಮಣ್ಣ್” ಎಂಬ ದೈವ ಜುಮಾದಿಯ ತುಳುವಿನ ಆದಿ ನುಡಿಯಂತೆ ಪೇಜಾವರ ಮಾಗಣೆಯ ಐದು ಗ್ರಾಮದ ಆರಾಧ್ಯ ದೈವಗಳಾಗಿ ಸುಮಾರು 800 ವರ್ಷಗಳಿಗೂ ಮಿಕ್ಕಿದ ಐತಿಹ್ಯದ ಕಾರಣಿಕದೊಂದಿಗೆ ನಂಬಿದ ಭಕ್ತರನ್ನು ಸಲಹುತ್ತಿರುವ ಸ್ಥಳ ಪೇಜಾವರ ಮಾಗಣೆ ಸಾರಬಳಿ ಶ್ರೀ ಧೂಮಾವತಿ ಬಂಟ ದೈವಸ್ಥಾನ ಕೆಂಜಾರು.

ಸನ್ನಿಧಿಯ ಜೀರ್ಣೋದ್ದಾರದ ಪೂರ್ವಭಾವಿಯಾಗಿ ವ್ಯವಸ್ಥೆ ಮಾಡಲಾದ ನೂತನ ಪವಿತ್ರ “ಕೊಡಿ ಮರ”ವನ್ನು ತಾ. 08.12.2024 ರ ಆದಿತ್ಯವಾರ ಬಜಪೆ ಕೇಂದ್ರ ಮೈದಾನದಿಂದ ಅಪರಾಹ್ನ 2.00 ಗಂಟೆಗೆ ಸರಿಯಾಗಿ ಮಾಗಣೆ ಸರ್ವರ ಹಾಗೂ ಪರವೂರ ಭಕ್ತರ ಕೂಡುವಿಕೆಯಿಂದ “ಭವ್ಯ ಮೆರವಣಿಗೆ”ಯಲ್ಲಿ ತಾರಬರಿ ಸನ್ನಿಧಾನಕ್ಕೆ ಬರಲಿದೆ.

ಪವಿತ್ರ ಕೊಡಿಮರ, ಪೀಠ ಹಾಗೂ ತಾಮ್ರ ಹೊದಿಕೆ ಸಹಿತ ಸೇವಾರ್ಥಿ: ಚಿಕ್ಕಪರಾರಿ ಶ್ರೀ ವಿಜಯ ಅನಂತ ಶೆಟ್ಟಿ ಮತ್ತು ಮಕ್ಕಳು

ತಾವೆಲ್ಲರೂ ಈ ಅಹ್ವಾನವನ್ನೇ ವೈಯುಕ್ತಿಕ ಆಮಂತ್ರಣವೆoದು ತಿಳಿದು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ದೈವಗಳ ಕೃಪೆಗೆ ಪಾತ್ರರಾಗುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

Leave a Comment