ಸುರತ್ಕಲ್ : ದಕ್ಷಿಣ ಕನ್ನಡದಲ್ಲಿ ಪ್ರಥಮ ಬಾರಿಗೆ ವಿಭಿನ್ನ ವೇಷ ಧರಿಸಿ ಅನಾರೋಗ್ಯ ಪೀಡಿತರ ನೆರವಿಗೆ ಸ್ಪಂದಿಸಿದ ಕೀರ್ತಿ ನಮ್ಮ ಜೂನಿಯರ್ ಕಟಪಾಡಿ ಎಂದೆ ಹೆಸರು ಪಡೆದಿರುವ ಧನಂಜಯ ಪೂಜಾರಿ ಮತ್ತು ತಂಡ ಅನಾರೋಗ್ಯ ಪೀಡಿತರ ನೆರವಿಗೆ ಸ್ಪಂದಿಸಿದ ಜೂನಿಯರ್ ಕಟಪಾಡಿ ಎಂದೆ ಹೆಸರು ಪಡೆದಿರುವ ಧನಂಜಯ ಪೂಜಾರಿ ಮತ್ತು ತಂಡ ಜನರ ಪ್ರಶಂಸೆಗೆ ಪಾತ್ರವಾಗಿದೆ.
ಕೃಷ್ಣಾಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ದಿನಾಂಕ 09/09/24 ರಂದು ಧನಂಜಯ ಪೂಜಾರಿ ಮತ್ತು ತಂಡ ವಿಭಿನ್ನ ವೇಷ ಧರಿಸುವ ಮೂಲಕ ಭಾಗವಹಿಸಿ ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ 4ನೇ ವರ್ಷದ ಯೋಜನೆಯಲ್ಲಿ ಓಟ್ಟು 70192/- ರೂ ಸಂಗ್ರಹ ಮಾಡಿದ್ದಾರೆ.
3 ವರ್ಷದಲ್ಲಿ ಸಂಗ್ರಹವಾದ ಒಟ್ಟು ಹಣ 1,50,841/-ರೂಪಾಯಿಯನ್ನು 12 ಜನ ಅನಾರೋಗ್ಯ ಪೀಡಿತರಿಗೆ ನೀಡಿರುತ್ತಾರೆ. 4ನೇ ವರ್ಷದಲ್ಲಿ ಸಂಗ್ರಹವಾದ ಓಟ್ಟು 70192/- ರೂ ಹಣವನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೀಡಲಾಗಿದೆ.