Mangalore and Udupi news
ಕ್ರೀಡೆದೇಶ- ವಿದೇಶಪ್ರಸ್ತುತ

ಕಾಸರಗೋಡಿಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಭೇಟಿ – ತನ್ನದೇ ಹೆಸರಿನ ರಸ್ತೆಯ ನಾಮಕರಣದಲ್ಲಿ ಹಾಜರು

Advertisement

ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರ ಗೌರವಾರ್ಥವಾಗಿ ಕೇರಳದ ಕಾಸರಗೋಡು ರಸ್ತೆಯೊಂದಕ್ಕೆ ಅವರ ಹೆಸರನ್ನು ಶುಕ್ರವಾರ ಮರು ನಾಮಕರಣ ಮಾಡಲಾಯಿತು. ಭಾರತ ಮತ್ತು ಬಾಂಗ್ಲಾದೇಶ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದ ಕಾಮೆಂಟರಿ ಮುಗಿಸಿ ದುಬೈನಿಂದ ಆಗಮಿಸಿದ ಗವಾಸ್ಕರ್ ಸ್ವತಃ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾಸರಗೋಡು ಪುರಸಭೆಯು ‘ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ ರಸ್ತೆ’ಯನ್ನು ‘ಸುನೀಲ್ ಗವಾಸ್ಕರ್ ಮುನ್ಸಿಪಲ್ ಸ್ಟೇಡಿಯಂ ರಸ್ತೆ’ ಎಂದು ಮರುನಾಮಕರಣ ಮಾಡಿದೆ. ಕ್ರಿಕೆಟ್‌ಗೆ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಗವಾಸ್ಕರ್ ಆಗಮನಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಸ್ಥಳೀಯ ಅಧಿಕಾರಿಗಳು ಮತ್ತು ಕ್ರಿಕೆಟ್ ಉತ್ಸಾಹಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಈ ಕ್ಷಣವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದರು.

ಸುನೀಲ್ ಗವಾಸ್ಕರ್ ಅವರ ಉಪಸ್ಥಿತಿಯು ಜಿಲ್ಲೆಯ ಕ್ರಿಕೆಟ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ. ರಣಜಿ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಮಿಂಚಿದ ಆಟಗಾರರು ಸೇರಿದಂತೆ ಪ್ರತಿಭಾವಂತ ಆಟಗಾರರನ್ನು ಪೋಷಿಸುವಲ್ಲಿ ಈ ಜಿಲ್ಲೆಗೆ ಶ್ರೀಮಂತ ಇತಿಹಾಸವಿದೆ ಎಂದು ಪುರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ ಹೇಳಿದರು.

ಭಾರತದ 1983 ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ವ್ಯಕ್ತಿಯಾಗಿದ್ದ ಗವಾಸ್ಕರ್, 10,000 ಟೆಸ್ಟ್ ರನ್‌ಗಳನ್ನು ದಾಟಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿವೃತ್ತಿಯ ನಂತರವೂ ಅವರು ಕಾಮೆಂಟೇಟರ್ ಮತ್ತು ಮಾರ್ಗದರ್ಶಕರಾಗಿ ಕ್ರೀಡೆಗೆ ಕೊಡುಗೆ ನೀಡುತ್ತಿದ್ದಾರೆ. ಕಾಸರಗೋಡಿಗೆ ಅವರ ಭೇಟಿಯು ಈ ಭಾಗದ ಉದಯೋನ್ಮುಖ ಕ್ರಿಕೆಟಿಗರಿಗೆ ಮತ್ತಷ್ಟು ಸ್ಫೂರ್ತಿ ನೀಡಿದೆ.

Related posts

Leave a Comment