ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಕಾಂತಾರ ಮೂವಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದವರು. ಏಕೆಂದರೆ ಟಾಲಿವುಡ್ ಬಳಿಕ ಇದೀಗ ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾ ಅವರನ್ನು ಅರಸಿ ಬಂದಿದ್ದು ಮಹಾರಾಜ ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯ ಮಾಡಲಿದ್ದಾರೆ ಎನ್ನುವ ಪೋಸ್ಟರ್ ಕುತೂಹಲ ಮೂಡಿಸಿದೆ.
ಬಾಲಿವುಡ್ ನ ಖ್ಯಾತ ನಿರ್ದೇಶಕರಾಗಿರುವ ಸಂದೀಪ್ ಸಿಂಗ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಮೂವಿಗೆ ರಿಷಬ್ ಶೆಟ್ಟಿಯೇ ಸರಿ ಎಂದು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲ ಮಾತುಕತೆಗಳು ಮುಗಿದಿದ್ದು ರಿಷಬ್ ಶೆಟ್ಟಿ ಕೂಡ ಓಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಅವರು ತಮ್ಮ ಇನ್ ಸ್ಟಾದಲ್ಲಿ ಶಿವಾಜಿ ರೂಪದಲ್ಲಿ ರಿಷಬ್ ಶೆಟ್ಟಿಯವರ ಫೋಟೋವನ್ನು ಹಂಚಿಕೊAಡಿದ್ದಾರೆ. ಇದರಿಂದ ಅಭಿಮಾನಿಗಳೆಲ್ಲಾ ರಿಷಬ್ ಅವರಿಗೆ ಗುಡ್ ಲಕ್ ಹೇಳುತ್ತಿದ್ದಾರೆ.
ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ ಎಂದು ಈ ಮೊದಲು ಹೇಳಲಾಗುತ್ತಿತ್ತು. ಆದರೆ ಸಿನಿಮಾಕ್ಕೆ ಯಾರು ಹೀರೋ, ಯಾವಾಗ ಬರುತ್ತದೆ, ಡೈರೆಕ್ಟರ್ ಯಾರು ಆಗಿರಬಹುದು ಎನ್ನುವ ಪ್ರಶ್ನೆಗಳು ಇದ್ದವು. ಸದ್ಯ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ತೆರೆ ಮೇಲೆ ಬರಲಿದ್ದಾರೆ. ತೆಲುಗಿನಲ್ಲಿ ಹನುಮಾನ್ ಸಿನಿಮಾ ಘೋಷಣೆ ಬೆನ್ನಲ್ಲೇ ರಿಷಬ್ ಅವರ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಘೋಷಣೆ ಆಗಿರುವುದು ಅಭಿಮಾನಿಗಳಿಗೆ ಸಂತಸ ಸಂಗತಿ ಯಾಗಿದೆ. ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನ ನಿರ್ದೇಶಕ ಸಂದೀಪ್ ಸಿಂಗ್ ಕಾಂಬೋದಲ್ಲಿ ಬರುತ್ತಿರುವ ಈ ಐತಿಹಾಸಿಕ ಸಿನಿಮಾ 2027 ಜನವರಿಗೆ ತೆರೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.
