Mangalore and Udupi news
ಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಹಿಂದೂ ಕಾರ್ಯಕರ್ತ ರಮೇಶ್ ಶೆಟ್ಟಿ ತೆಳ್ಳಾರ್ ಮೇಲೆ ಜಾಮೀನು ರಹಿತ ಸುಮೋಟೊ ಕೇಸ್.!! ಹಿಂದೂ ಕಾರ್ಯಕರ್ತರ ಆಕ್ರೋಶ

ಕಾರ್ಕಳ : ಹಿಂದೂ ಕಾರ್ಯಕರ್ತ ರಮೇಶ್ ಶೆಟ್ಟಿ ತೆಳ್ಳಾರ್ ಮೇಲೆ ಜಾಮೀನು ರಹಿತ ಸುಮೋಟೊ ಕೇಸ್ ದಾಖಲಿಸಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಕಳದ ಶ್ರೀ ವೆಂಕಟರಮಣ ದೇವರ ಲಕ್ಷದೀಪೋತ್ಸವದ ವೇಳೆ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಮನವಿ ಮಾಡಿದ ಕಾರಣಕ್ಕೆ ಇಂತಹ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಈ ಘಟನೆಯಿಂದ ಹಿಂದೂ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಜಾಗರಣ ವೇದಿಕೆ ಆಗ್ರಹ ಹಾಗೂ ಎಚ್ಚರಿಕೆ.??!

ಕಾರ್ಕಳದ ಶ್ರೀ ವೆಂಕಟರಮಣ ದೇವರ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಈ ವೇಳೆ ನೂರಾರು ಜಾತ್ರಾ ಅಂಗಡಿ ವ್ಯಾಪಾರಸ್ಥರು ಕಾರ್ಕಳಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ರಥ ಬೀದಿಯಲ್ಲಿರುವ ಅಂಗಡಿ ಮಾಲೀಕರಿಗೆ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಸಂಘದ ಸದಸ್ಯರಿಗೆ ಅಂಗಡಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ಹಿಂದೂ ದೇವಸ್ಥಾನದ ಹತ್ತಿರ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತಿಲ್ಲ ಎಂಬ ಆದೇಶವಿದೆ. ಅಂಗಡಿ ಮಾಲೀಕರು ಇದಕ್ಕೆ ಒಪ್ಪಿ ಎಲ್ಲಾ ಅಂಗಡಿ ಮುಂಗಟ್ಟುಗಳ ಸ್ಥಳವನ್ನು ನಿಗದಿ ಮಾಡಲಾಗಿತ್ತು. ಇದರಲ್ಲಿ ಕಾನೂನು ಬಾಹಿರವಾಗಿ ಯಾವ ಕೆಲಸವೂ ನಡೆದಿಲ್ಲ. ಏಕಾಏಕಿಯಾಗಿ ಪೊಲೀಸರು ಮಧ್ಯಪ್ರವೇಶ ಮಾಡಿ ಜಿಲ್ಲಾ ಸ್ತರದ ಕಾರ್ಯಕರ್ತರ ಮೇಲೆ ಜಾಮೀನು ರಹಿತ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕ್ರಮವನ್ನು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿಂದೂ ಸಂಘಟನೆಗಳ ದಮನ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ವಿರೋಧಿ ರಾಜ್ಯ ಸರ್ಕಾರವನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಇವರು ಈ ಹಿಂದೆಯೂ ಅನೇಕ ಹಿಂದೂ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ, ಹಿಂದೂ ವ್ಯಾಪಾರಸ್ಥರು ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ ಎನ್ನುವುದರಲ್ಲಿ ಯಾರ ಕೋಮುಭಾವನೆ ಕೆರಳುತ್ತದೆ, ಇದರಲ್ಲಿ ಯಾರ ಮೇಲೆ ದ್ವೇಷ ಹುಟ್ಟುವುದು.? ಅಶಾಂತಿ ಹೇಗೆ ಸೃಷ್ಟಿ ಆಗುವುದು ಎನ್ನುವುದು ಇಲಾಖೆ ಸ್ಪಷ್ಟಪಡಿಸಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಶ್ನೆ ಮಾಡಿದೆ.

ಹಿಂದೂ ದೇವಾಲಯಗಳ ಆವರಣದಲ್ಲಿ ಹಿಂದುಗಳು ವ್ಯಾಪಾರ ಮಾಡಲು ಕೂಡ ಸ್ವತಂತ್ರರಲ್ಲ ಎಂಬ ಸ್ಥಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೃಷ್ಟಿಸಿದ್ದು, ಇದರ ವಿರುದ್ಧ ಹಿಂದು ಜಾಗರಣ ವೇದಿಕೆ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದಿದ್ದಾರೆ.

ಕೇವಲ ಹಿಂದೂ ಕಾರ್ಯಕರ್ತರ ಮನಸ್ಥಿತಿ ಕುಗ್ಗಿಸುವ ಯತ್ನದ ಭಾಗವಾಗಿ ಹಾಕಿರುವ ಈ ಸುಳ್ಳು ಕೇಸನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ನಾಲ್ಕು ದಿನದ ಒಳಗಾಗಿ ಈ ಸುಮೊಟೊ ಕೇಸನ್ನು ಪೊಲೀಸರು ಹಿಂಪಡೆಯದೆ ಹೋದರೆ ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Related posts

Leave a Comment