Mangalore and Udupi news
ಅಪರಾಧರಾಜ್ಯ

ಅಕ್ರಮವಾಗಿ ಪ್ರಾಣಿಗಳ ಸಾಗಾಟ: ಪ್ರಯಾಣಿಕನ ಬ್ಯಾಗ್‌ನಲ್ಲಿ ಇಲಿ, ಹಲ್ಲಿ, ಆಮೆ ಪತ್ತೆ

ವಿದೇಶದಿಂದ ಅಕ್ರಮವಾಗಿ ಗಾಂಜಾ, ಡ್ರಗ್, ಚಿನ್ನ, ಅಂಬರ್ ಗ್ರೀಸ್ ಹೀಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಸಾಗಾಟ ಮಾಡಿ ಪೊಲೀಸರ ಅತಿಥಿಯಾಗ್ತಾರೆ. ಆದರೆ ಇಲ್ಲೊಂದು ಕಡೆ ಜೀವಂತ ಪ್ರಾಣಿಗಳನ್ನು ಸಾಗಿಸಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೆಂಪೇಗೌಡ ಏರ್ಪೋಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಸಿಕ್ಕವು ಇಲಿ, ಹಲ್ಲಿ-ಆಮೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಪ್ರಾಣಿ ಸಾಗಾಣಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಕೌಲಾಲಂಪುರದಿAದ ಬಂದ ವಿಮಾನದಲ್ಲಿ ಬರೋಬ್ಬರಿ 40 ಪೆಟ್ಟಿಗೆಗಳಲ್ಲಿ ವಿವಿಧ ಜೀವಿಗಳ ಸಾಗಾಟವನ್ನು ತಡೆಹಿಡಿದಿದ್ದಾರೆ. ವಿವಿಧ ಜಾತಿಯ ಆಮೆಗಳು, ಹಲ್ಲಿಗಳು ಮತ್ತು ಇಲಿಗಳನ್ನು ಅಡಗಿಸಿಟ್ಟು ತರಲಾಗುತ್ತಿತ್ತು.

The first bag contained 24 animals, including Aldabra giant tortoises, red-footed tortoises, beaded lizards, shingle-back skinks, juvenile rhinoceros iguanas, and the rare Albino bat. (Pic for representation)

ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡುತ್ತಿದ್ದ ಪ್ರಾಣಿಗಳನ್ನು ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ ಹಾಗೂ ಕೆಂಪು ಇಲಿ ಸೇರಿದಂತೆ ಟ್ರಾಲಿ ಬ್ಯಾಗ್‌ನಲ್ಲಿ 40 ಬಾಕ್ಸ್ಗಳಲ್ಲಿದ್ದ ವಿವಿಧ ಬಗೆಯ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ.

ಏರ್‌ಪೋರ್ಟ್ನಲ್ಲಿ ಪರಿಶೀಲನೆ ವೇಳೆ ಬಾಕ್ಸ್ನಲ್ಲಿ ಪ್ರಾಣಿಗಳಿರುವುದು ಪತ್ತೆ ಆಗಿದೆ. ಕೌಲಲಾಂಪುರದಿAದ ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ತಂದಿದ್ದರು. ಸದ್ಯ ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Forty rare animals stuffed in a trolley bag found in Bengaluru airport, two arrested. The seized animals included baby American alligators and a rare Albino bat, which are said to be exotic animals.

Related posts

Leave a Comment